
ಆದರೆ ಇತ್ತೀಚಿಗೆ ಇಂಗ್ಲಿಷ್ ಕಲಿಸುತ್ತೇನೆಂದು ಹೇಳಿಕೊಂಡಿದ್ದ ಮೊಬೈಲ್ ಅಪ್ಲಿಕೇಶನ್ ಒಂದು ಅನುಮತಿ ಕೇಳದೆಯೇ ತನ್ನ ಅಪ್ಲಿಕೇಶನ್ನ ಪ್ರೊಮೋಷನ್ಗೆ ಶಶಿ ತರೂರ್ರ ಹೆಸರನ್ನ ಬಳಕೆ ಮಾಡಿಕೊಂಡು ಪೇಚಿಗೆ ಸಿಲುಕಿದೆ. ಶಶಿ ತರೂರ್ರಂತೆ ನಿರರ್ಗಳ ಇಂಗ್ಲೀಷ್ ಮಾತನಾಡಲು ತಮ್ಮ ಈ ಅಪ್ಲಿಕೇಶನ್ ಬಳಕೆ ಮಾಡಿ ಎಂದು ಅದು ಹೇಳಿಕೊಂಡಿತ್ತು.
ಮೊಬೈಲ್ ಅಪ್ಲಿಕೇಶನ್ನ ಈ ಉದ್ಧಟತನದ ಸಂಬಂಧ ಟ್ವಿಟರ್ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್, ಈ ರೀತಿಯ ಸುಳ್ಳು ಆಮಿಷಗಳ ಮೂಲಕ ಈ ಮೊಬೈಲ್ ಅಪ್ಲಿಕೇಶನ್ ವಿದ್ಯಾರ್ಥಿಗಳನ್ನ ತಪ್ಪು ದಾರಿಗೆ ಎಳೆದಿದೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಈ ಅಪ್ಲಿಕೇಶನ್ಗೂ ನನಗೂ ಯಾವುದೇ ಸಂಬಂಧವಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ನನ್ನ ಹೆಸರು ಹಾಗೂ ಫೋಟೋವನ್ನ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ನಾನು ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.