alex Certify ಬಿಬಿಸಿ ಚಾನಲ್ ನ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿಯಲ್ಲಿ ಸಿಎಎ ಹೋರಾಟಗಾರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಬಿಸಿ ಚಾನಲ್ ನ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿಯಲ್ಲಿ ಸಿಎಎ ಹೋರಾಟಗಾರ್ತಿ

ನವದೆಹಲಿ: ಬಿಬಿಸಿಯ ನ್ಯೂಸ್ ಚಾನಲ್ ವರ್ಷದ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ನವದೆಹಲಿ ಶಾಹಿನ್ ಬಾಗ್ ನ ಅಜ್ಜಿ ಬಿಲ್ಕಿಸ್ ಅವರ ಹೆಸರೂ ಇದೆ.

ಈ 100 ಮಹಿಳೆಯರು ಪ್ರಕ್ಷುಬ್ಧ ಪರಿಸ್ಥಿತಿಗಳ ಬದಲಾವಣೆಗಾಗಿ ಹೋರಾಡಿ ಹೈಲೈಟ್ ಆದವರು ಎಂದು ಬಿಬಿಸಿ ಹೇಳಿದೆ. ಬಿಲ್ಕಿಸ್ ಅವರು ನವದೆಹಲಿಯ ಶಾಹಿನ್ ಬಾಗ್ ನ ಇತರ ವಯಸ್ಸಿನ ಮಹಿಳೆಯರನ್ನು ಸೇರಿಸಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ನಡೆಸಿದ್ದರು.

82 ವರ್ಷದ ಬಿಲ್ಕಿಸ್ ನವದೆಹಲಿ ಶಾಹಿನ್ ಬಾಗ್ ನಲ್ಲಿ ಸಿಎಎ ವಿರುದ್ಧ ವಾರಗಳವರೆಗೂ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಶಾಂತಿಯುತವಾಗಿರುವಂತೆ ನೋಡಿಕೊಂಡಿದ್ದರು. ನಂತರ ಅವರ ಜತೆ ಸಾವಿರಾರು ಜನರು ಪ್ರತಿಭಟನೆಗೆ ಸೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...