alex Certify ದೇಶದ್ರೋಹಿ ಎಂದು ಅಪಖ್ಯಾತಿ ಪಡೆದ ಬಿರಿಯಾನಿ…! ಕಾರಣ ಏನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ್ರೋಹಿ ಎಂದು ಅಪಖ್ಯಾತಿ ಪಡೆದ ಬಿರಿಯಾನಿ…! ಕಾರಣ ಏನು ಗೊತ್ತಾ….?

ದೆಹಲಿಯ ಶಾಹೀನ್​ ಬಾಗ್​ ಪ್ರದೇಶದಲ್ಲಿ ಸಿಎಎ ವಿರೋಧಿಸಿ ವಾರಗಳ ಕಾಲ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಈ ಪ್ರತಿಭಟನೆಯನ್ನ ಅಪಖ್ಯಾತಿಗೊಳಿಸಬೇಕು ಅಂತಾ ಬಿರಿಯಾನಿಯನ್ನ ಅಸ್ತ್ರವನ್ನಾಗಿ ಬಳಕೆ ಮಾಡಲಾಯ್ತು. ಈ ಘಟನೆ ನಡೆದು ಇದೀಗ ವರ್ಷಗಳೇ ಕಳೆದಿದೆ. ಆದರೆ ಬಿರಿಯಾನಿ ಮಾತ್ರ ದೇಶ ವಿರೋಧಿ ತಿನಿಸು ಎಂಬ ಅಪಖ್ಯಾತಿಯನ್ನ ಗಳಿಸಿಬಿಟ್ಟಿದೆ.

ಸೆಪ್ಟೆಂಬರ್​ ತಿಂಗಳಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ದೆಹಲಿ ಸಿಎಂ ಕೇಜ್ರಿವಾಲ್​ ವಿರುದ್ಧ ಮಾತನಾಡುವ ಭರದಲ್ಲಿ, ಶಾಹೀನಾಭಾಗ್​ ಪ್ರತಿಭಟನಾಕಾರರಿಗೆ ಕೇಜ್ರಿವಾಲ್​ ಬಿರಿಯಾನಿ ನೀಡಿದ್ದರು ಎಂದಿದ್ದಾರೆ.

ಈ ಬಾರಿ ಕೃಷಿ ಮಸೂದೆ ವಿರೋಧಿಸಿ ಪಂಜಾಬ್​ ಹಾಗೂ ಹರಿಯಾಣದ ರೈತರು ದೆಹಲಿ ಗಡಿಯಲ್ಲಿ ರೈತರು ಬೀಡು ಬಿಟ್ಟಿದ್ದಾರೆ. ಈ ಪ್ರತಿಭಟನೆಯಲ್ಲೂ ಬಿರಿಯಾನಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ದೇಶದ್ರೋಹಿ ಪಟ್ಟ ಅಲಂಕರಿಸಿಕೊಂಡಿದೆ. ಪ್ರತಿಭಟನೆ ವಿರೋಧಿಗಳು ಇದನ್ನ ಮತ್ತೊಂದು ಶಹೀನ್​ ಬಾಗ್​ ಪ್ರೊಟೆಸ್ಟ್ ಎಂದು ಕರೆದ್ರೆ ಇನ್ನೂ ಹಲವರು ಪ್ರತಿಭಟನೆಯನ್ನ ಅಪಖ್ಯಾತಿಗೊಳಿಸಲು ಮಾಡುತ್ತಿರುವ ಸಂಚು ಇದು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...