ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಸಿಎಎ ವಿರೋಧಿಸಿ ವಾರಗಳ ಕಾಲ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಈ ಪ್ರತಿಭಟನೆಯನ್ನ ಅಪಖ್ಯಾತಿಗೊಳಿಸಬೇಕು ಅಂತಾ ಬಿರಿಯಾನಿಯನ್ನ ಅಸ್ತ್ರವನ್ನಾಗಿ ಬಳಕೆ ಮಾಡಲಾಯ್ತು. ಈ ಘಟನೆ ನಡೆದು ಇದೀಗ ವರ್ಷಗಳೇ ಕಳೆದಿದೆ. ಆದರೆ ಬಿರಿಯಾನಿ ಮಾತ್ರ ದೇಶ ವಿರೋಧಿ ತಿನಿಸು ಎಂಬ ಅಪಖ್ಯಾತಿಯನ್ನ ಗಳಿಸಿಬಿಟ್ಟಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಮಾತನಾಡುವ ಭರದಲ್ಲಿ, ಶಾಹೀನಾಭಾಗ್ ಪ್ರತಿಭಟನಾಕಾರರಿಗೆ ಕೇಜ್ರಿವಾಲ್ ಬಿರಿಯಾನಿ ನೀಡಿದ್ದರು ಎಂದಿದ್ದಾರೆ.
ಈ ಬಾರಿ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ಹಾಗೂ ಹರಿಯಾಣದ ರೈತರು ದೆಹಲಿ ಗಡಿಯಲ್ಲಿ ರೈತರು ಬೀಡು ಬಿಟ್ಟಿದ್ದಾರೆ. ಈ ಪ್ರತಿಭಟನೆಯಲ್ಲೂ ಬಿರಿಯಾನಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ದೇಶದ್ರೋಹಿ ಪಟ್ಟ ಅಲಂಕರಿಸಿಕೊಂಡಿದೆ. ಪ್ರತಿಭಟನೆ ವಿರೋಧಿಗಳು ಇದನ್ನ ಮತ್ತೊಂದು ಶಹೀನ್ ಬಾಗ್ ಪ್ರೊಟೆಸ್ಟ್ ಎಂದು ಕರೆದ್ರೆ ಇನ್ನೂ ಹಲವರು ಪ್ರತಿಭಟನೆಯನ್ನ ಅಪಖ್ಯಾತಿಗೊಳಿಸಲು ಮಾಡುತ್ತಿರುವ ಸಂಚು ಇದು ಎಂದಿದ್ದಾರೆ.