ನವದೆಹಲಿ: ಕೊರೋನಾ ನಡುವೆ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನ ನಿಗದಿಯಾಗಿದೆ. ಸೆಪ್ಟೆಂಬರ್ 14 ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನ ರಜೆ, ವೀಕೆಂಡ್ ಬ್ರೇಕ್ ಇಲ್ಲದೇ ಸತತ 18 ದಿನ ನಡೆಯಲಿದೆ.
ಕಲಾಪಕ್ಕೆ 72 ತಾಸಿಗೆ ಮೊದಲು ಸಂಸದರ ಕೋವಿಡ್ ಪರೀಕ್ಷೆ ನಡೆಸಲಾಗುವುದು. ರಾಷ್ಟ್ರಪತಿ ರಾಮನಾಥ ಕೋವಿಂದ್ ಸೆಪ್ಟಂಬರ್ 14 ರಂದು ಬೆಳಗ್ಗೆ 9ರಿಂದ ಅಧಿವೇಶನ ಕಲಾಪ ನಡೆಸಲು ನಡೆಸಲು ಸೂಚಿಸಿದ್ದಾರೆ. ಬೆಳಿಗ್ಗೆ ಲೋಕಸಭೆ ಮತ್ತು ಸಂಜೆ ರಾಜ್ಯಸಭೆ ಅಧಿವೇಶನ ಕಲಾಪ ತಲಾ ನಾಲ್ಕು ತಾಸು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.