ಲಸಿಕೆ ತಯಾರಕ ಸಂಸ್ಥೆಯಾದ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪುಣೆಯ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಉಂಟಾದ ನಷ್ಟ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಈ ವಿಚಾರವಾಗಿ ಮಾತನಾಡಿದ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನವಲ್ಲಾ, ಪುಣೆಯ ಘಟಕದಲ್ಲಿ ಉಂಟಾದ ಅಗ್ನಿ ಅನಾಹುತದಿಂದಾಗಿ ಸೇರಂಗೆ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಾನಿ ಉಂಟಾಗಿದೆ. ಬಿಜಿಎಸ್ ಹಾಗೂ ರೊಟಾವೈರಸ್ ಲಸಿಕೆಗಳನ್ನ ತಯಾರು ಮಾಡುತ್ತಿದ್ದ ಘಟಕದಲ್ಲೇ ಅಗ್ನಿ ಅವಘಡ ಸಂಭವಿಸಿರೋದ್ರಿಂದ ನಮಗೆ ತುಂಬಾನೇ ನಷ್ಟವಾಗಿದೆ ಎಂದು ಅವರು ಹೇಳಿದ್ರು.
ಅಗ್ನಿ ಅವಘಡ ಸಂಭವಿಸುವ ವೇಳೆಯಲ್ಲಿ ಈ ಘಟಕದಲ್ಲಿ ಯಾವುದೇ ಲಸಿಕೆಗಳನ್ನ ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿರಲಿಲ್ಲ. ಇನ್ನೊಂದು ಅದೃಷ್ಟದ ವಿಚಾರ ಅಂದರೆ ಈ ಘಟಕದಲ್ಲಿ ನಾವು ಕೋವಿಶೀಲ್ಡ್ ಲಸಿಕೆಗಳನ್ನ ಉತ್ಪಾದನೆ ಮಾಡುತ್ತಿರಲಿಲ್ಲ ಎಂದು ಸೇರಂ ಇನ್ಸ್ಟಿಟ್ಯೂಟ್ ಸಿಎಂಡಿ ಸೈರಸ್ ಪೂನವಲ್ಲಾ ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕೊರೊನಾ ಲಸಿಕೆ ಘಟಕದಲ್ಲಿ ಬೆಂಕಿ ಅನಾಹುತ ಕಾಣಿಸಿಲ್ಲ ಅನ್ನೋದೇ ಸದ್ಯದ ಮಟ್ಟಿಗೆ ಅದೃಷ್ಟದ ವಿಚಾರವಾಗಿದೆ. ಅಗ್ನಿ ಅವಘಢದಿಂದ ಕೋವಿಶೀಲ್ಡ್ ತಯಾರಕ ಘಟಕಕ್ಕೆ ಎಳ್ಳಷ್ಟೂ ಹಾನಿ ಉಂಟಾಗಿಲ್ಲ. ಘಟನೆ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ರು.