alex Certify ಅಗ್ನಿ ಅವಘಡದಿಂದ ಸೇರಂ ಇನ್ಸ್​​ಟಿಟ್ಯೂಟ್ ಗೆ​ ಉಂಟಾದ ನಷ್ಟವೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ನಿ ಅವಘಡದಿಂದ ಸೇರಂ ಇನ್ಸ್​​ಟಿಟ್ಯೂಟ್ ಗೆ​ ಉಂಟಾದ ನಷ್ಟವೆಷ್ಟು ಗೊತ್ತಾ…?

ಲಸಿಕೆ ತಯಾರಕ ಸಂಸ್ಥೆಯಾದ ಸೇರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದ ಪುಣೆಯ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಉಂಟಾದ ನಷ್ಟ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಈ ವಿಚಾರವಾಗಿ ಮಾತನಾಡಿದ ಸೇರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಒ ಆಧಾರ್​ ಪೂನವಲ್ಲಾ, ಪುಣೆಯ ಘಟಕದಲ್ಲಿ ಉಂಟಾದ ಅಗ್ನಿ ಅನಾಹುತದಿಂದಾಗಿ ಸೇರಂಗೆ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಾನಿ ಉಂಟಾಗಿದೆ. ಬಿಜಿಎಸ್​​ ಹಾಗೂ ರೊಟಾವೈರಸ್​​ ಲಸಿಕೆಗಳನ್ನ ತಯಾರು ಮಾಡುತ್ತಿದ್ದ ಘಟಕದಲ್ಲೇ ಅಗ್ನಿ ಅವಘಡ ಸಂಭವಿಸಿರೋದ್ರಿಂದ ನಮಗೆ ತುಂಬಾನೇ ನಷ್ಟವಾಗಿದೆ ಎಂದು ಅವರು ಹೇಳಿದ್ರು.

ಅಗ್ನಿ ಅವಘಡ ಸಂಭವಿಸುವ ವೇಳೆಯಲ್ಲಿ ಈ ಘಟಕದಲ್ಲಿ ಯಾವುದೇ ಲಸಿಕೆಗಳನ್ನ ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿರಲಿಲ್ಲ. ಇನ್ನೊಂದು ಅದೃಷ್ಟದ ವಿಚಾರ ಅಂದರೆ ಈ ಘಟಕದಲ್ಲಿ ನಾವು ಕೋವಿಶೀಲ್ಡ್ ಲಸಿಕೆಗಳನ್ನ ಉತ್ಪಾದನೆ ಮಾಡುತ್ತಿರಲಿಲ್ಲ ಎಂದು ಸೇರಂ ಇನ್​​ಸ್ಟಿಟ್ಯೂಟ್​ ಸಿಎಂಡಿ ಸೈರಸ್​ ಪೂನವಲ್ಲಾ ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ, ಕೊರೊನಾ ಲಸಿಕೆ ಘಟಕದಲ್ಲಿ ಬೆಂಕಿ ಅನಾಹುತ ಕಾಣಿಸಿಲ್ಲ ಅನ್ನೋದೇ ಸದ್ಯದ ಮಟ್ಟಿಗೆ ಅದೃಷ್ಟದ ವಿಚಾರವಾಗಿದೆ. ಅಗ್ನಿ ಅವಘಢದಿಂದ ಕೋವಿಶೀಲ್ಡ್ ತಯಾರಕ ಘಟಕಕ್ಕೆ ಎಳ್ಳಷ್ಟೂ ಹಾನಿ ಉಂಟಾಗಿಲ್ಲ. ಘಟನೆ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...