
ಪಾಕಿಸ್ತಾನ ಮತ್ತು ಭಯೋತ್ಪಾದಕರ ನಡುವೆ ಒಡನಾಟ ಹೊಂದಿರುವ ಈ ಹೆಸರನ್ನ ಬದಲಾಯಿಸಿ ಅಂತಾ ನಿತಿನ್ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಕರಾಚಿ ಸ್ವೀಟ್ ಶಾಪ್ ಮಾಲೀಕ ತಾವು ಕರಾಚಿ ಮೂಲದವರೆಂದೂ ಪೂರ್ವಜರ ನೆನಪಿಗಾಗಿ ಈ ಹೆಸರು ಇಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಅಂಗಡಿ ಮಾಲೀಕನ ಯಾವುದೇ ಸಮರ್ಥನೆಗೆ ಮಣಿಯದ ಶಿವಸೇನೆ ಮುಖಂಡ ಮರಾಠಿಯಲ್ಲೇ ಯಾವುದಾದರೊಂದು ಹೆಸರಿಡುವಂತೆ ಒತ್ತಾಯಿಸಿದ್ದಾರೆ.
ಅಂಗಡಿ ಮರುನಾಮಕರಣ ಮಾಡಲು ಯಾವುದೇ ಕೆಲಸಕ್ಕೆ ನಾನು ಸಹಾಯ ಮಾಡುತ್ತೇನೆ. ಆದರೆ 15 ದಿನಗಳಲ್ಲಿ ಈ ಹೆಸರು ಬದಲಾಗಬೇಕು ಎಂದು ನಂದಗಾಂವ್ಕರ್ ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯ ಅಂಗಡಿ ಮಾಲೀಕರು ನಾಮಫಲಕವನ್ನ ಕಾಗದದಿಂದ ಮುಚ್ಚಿದ್ದಾರೆ.