alex Certify ಕೊರೊನಾ ಸೋಂಕಿನ ಮಧ್ಯೆ ಖುಷಿ ಸುದ್ದಿ…! ಭಾರತದಲ್ಲೂ 2 ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಸಿಗಲಿದೆ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿನ ಮಧ್ಯೆ ಖುಷಿ ಸುದ್ದಿ…! ಭಾರತದಲ್ಲೂ 2 ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಸಿಗಲಿದೆ ಲಸಿಕೆ

ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿದೆ. ಇದ್ರ ಮಧ್ಯೆ ಶೀಘ್ರದಲ್ಲೇ 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆಯಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ 2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸಲು ಅನುಮತಿ ಕೇಳಿದೆ.

ತಜ್ಞರ ಸಮಿತಿ ಮಂಗಳವಾರ ಭಾರತ್ ಬಯೋಟೆಕ್‌ನ ಕೋವಿಡ್ -19 ಲಸಿಕೆ ಕೊವಾಕ್ಸಿನ್‌ನ ಎರಡನೇ / ಮೂರನೇ ಹಂತದ ಪರೀಕ್ಷೆಯನ್ನು 2-18 ವಯಸ್ಸಿನವರಿಗೆ ನಡೆಸಲು ಶಿಫಾರಸು ಮಾಡಿದೆ. ಅಧಿಕೃತ ಮೂಲಗಳು ಈ ಮಾಹಿತಿಯನ್ನು ನೀಡಿವೆ. ದೆಹಲಿ ಮತ್ತು ಪಾಟ್ನಾದ ಏಮ್ಸ್ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು.

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನ ಕೋವಿಡ್ -19 ತಜ್ಞರ ಸಮಿತಿ ಮಂಗಳವಾರ ಭಾರತ್ ಬಯೋಟೆಕ್ ಸಲ್ಲಿಸಿದ ಅರ್ಜಿಯ ಬಗ್ಗೆ ಚರ್ಚಿಸಿದೆ. ಕಂಪನಿಯ ಅರ್ಜಿಯ ಬಗ್ಗೆ ವಿವರವಾದ ಚರ್ಚೆಯ ನಂತರ ಪ್ರಸ್ತಾವಿತ ಎರಡನೇ / ಮೂರನೇ ಹಂತದ ಪರೀಕ್ಷೆಗೆ ಅವಕಾಶ ನೀಡಲು ಸಮಿತಿ ಶಿಫಾರಸು ಮಾಡಿದೆ ಎಂದು ಮೂಲವೊಂದು ತಿಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...