alex Certify ಸ್ವೀಡಿಷ್​ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕೇಂದ್ರ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವೀಡಿಷ್​ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕೇಂದ್ರ ಸಚಿವ

ಸ್ಕ್ಯಾನಿಯಾ ಕಂಪನಿಯ ಜೊತೆಗಿನ ಭ್ರಷ್ಟಾಚಾರದ ಆರೋಪ ಸಂಬಂಧ ಕೇಂದ್ರ ಸಚಿವ ನಿತಿನ್​ ಗಡ್ಕರಿ ವಿರುದ್ಧ ವರದಿ ಬಿತ್ತರಿಸಿದ್ದ ಸ್ವೀಡಿಷ್​ ಮಾಧ್ಯಮಗಳಾದ ಎಸ್​ವಿಟಿ ಹಾಗೂ ಝೆಡ್​ಡಿಎಫ್​ ವಿರುದ್ಧ ಗಡ್ಕರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.‌

2016ರಲ್ಲಿ ನಿತಿನ್​ ಗಡ್ಕರಿ ಮಗಳ ಮದುವೆ ಸಮಾರಂಭದ ವೇಳೆ ಟ್ರಕ್​ ಹಾಗೂ ಬಸ್​ ತಯಾರಕ ಕಂಪನಿಯಾದ ಸ್ಕ್ಯಾನಿಯಾದಿಂದ ಗಡ್ಕರಿ ಬಸ್​ ಖರೀದಿ ಮಾಡಿದ್ದಾರೆ. ಆದರೆ ಈ ಸಂಬಂಧ ಬಿಲ್​ ಪಾವತಿ ಮಾಡಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಬಿತ್ತರಿಸಿತ್ತು.

ಆದರೆ ಸ್ವೀಡಿಷ್​ ಮಾಧ್ಯಮಗಳ ಈ ಆರೋಪವನ್ನ ತಳ್ಳಿ ಹಾಕಿರುವ ಗಡ್ಕರಿ ಕಚೇರಿ ಈ ಸಂಬಂಧ ಸ್ಪಷ್ಟನೆಯನ್ನ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಹಾಗೂ ಅವರ ಕುಟುಂಬಸ್ಥರ ಮೇಲೆ ಸ್ವೀಡಿಷ್​ ಮಾಧ್ಯಮಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸ್ಕ್ಯಾನಿಯಾ ಬಸ್​ ಪ್ರಕರಣ ಸ್ವೀಡಿಷ್​ಗೆ ಸೇರಿದ್ದಾಗಿದೆ. ಈ ಪ್ರಕರಣದಲ್ಲಿ ಗಡ್ಕರಿ ಹಾಗೂ ಕುಟುಂಬಸ್ಥರನ್ನ ಸೇರಿಸಿರೋದು ಆಧಾರ ರಹಿತ ಆರೋಪವಾಗಿದೆ ಎಂದು ಹೇಳಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...