alex Certify ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಯಾರು ಗೊತ್ತಾ…?

ಪ್ರಧಾನಿ ನರೇಂದ್ರ ಮೋದಿ ಶನಿವಾರ ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಚಾಲನೆ ನೀಡಿದ್ರು. ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶ ಒಂದು ವರ್ಷದಿಂದ ಕಾತುರದಿಂದ ಕಾಯುತ್ತಿದ್ದ ಲಸಿಕೆಯ ಹಂಚಿಕೆ ಕಾರ್ಯಕ್ಕೆ ಹಸಿರು ನಿಶಾನೆ ತೋರಿದ್ರು.

ಲಸಿಕೆ ಹಂಚಿಕೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬ ಜನತೆ ಕೊರೊನಾಗೆ ಲಸಿಕೆ ಯಾವಾಗ ಲಭ್ಯವಾಗುತ್ತೆ ಎಂದು ಕೇಳುತ್ತಿದ್ದರು. ಆದರೆ ಈಗ ಲಸಿಕೆ ದೇಶದಲ್ಲಿ ಲಭ್ಯವಿದೆ. ಈ ಸಂದರ್ಭದಲ್ಲಿ ನಾನು ದೇಶದ ಜನತೆಗೆ ಶುಭಾಶಯ ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ರು.

ಯಾವುದೇ ಲಸಿಕೆಗಳನ್ನ ಕಂಡು ಹಿಡಿಯಬೇಕು ಅಂದರೆ ಹಲವಾರು ವರ್ಷಗಳೇ ಹಿಡಿಯುತ್ತೆ. ಆದರೆ ಇಡೀ ವಿಶ್ವದ ಇತಿಹಾಸದಲ್ಲೇ ಕೊರೊನಾಗೆ ಬಹಳ ಕಡಿಮೆ ಅವಧಿಯಲ್ಲಿ ಲಸಿಕೆಯನ್ನ ಅಭಿವೃದ್ಧಿ ಪಡಿಸಲಾಗಿದೆ. ನಾವು ಮೊದಲ ಹಂತದಲ್ಲಿ 3 ಕೋಟಿ ಜನಸಂಖ್ಯೆಯನ್ನ ಪೂರೈಸುವ ಗುರಿ ಹೊಂದಿದ್ದೇವೆ. ಎರಡನೇ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಹೇಳಿದ್ರು.

ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನ ಅರ್ಪಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಕೊರೊನಾ ವಾರಿಯರ್ಸ್​ ಕುಟುಂಬಸ್ಥರಿಂದ ದೂರ ಇದ್ದು ಕರ್ತವ್ಯ ನಿರ್ವಹಿಸ್ತಾ ಇದ್ದಾರೆ. ಪ್ರೀತಿ ಪಾತ್ರರಿಂದ ದೂರವಿದ್ದು ಜೀವದ ಹಂಗು ತೊರೆದು ಸೇವೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಈ ಲಸಿಕೆಯನ್ನ ನೀಡುತ್ತಿದ್ದೇವೆ ಎಂದು ಹೇಳಿದ್ರು.

ಇನ್ನು ಇಡೀ ದೇಶದಲ್ಲಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಮೊದಲ ಕೊರೊನಾ ಲಸಿಕೆ ನೀಡಲಾಯ್ತು. ಮನೀಶ್​ ಕುಮಾರ್​ ಎಂಬ ಪೌರ ಕಾರ್ಮಿಕನಿಗೆ ಸೇರಂ ಇನ್ಸ್​ಟಿಟ್ಯೂಟ್​ ತಯಾರಿಸಿದ ಕೋವಿಶೀಲ್ಡ್​ ಲಸಿಕೆಯ ಮೊದಲ ಡೋಸ್​ ನೀಡಲಾಗಿದೆ.

ಮನೀಷ್​​ಗೆ ವೈದ್ಯರು ಕೊರೊನಾ ಲಸಿಕೆ ನೀಡುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಹಾಗೂ ಏಮ್ಸ್ ನಿರ್ದೇಶಕ ಡಾ. ರಂದೀಪ್​ ಗುಲೇರಿಯಾ ಉಪಸ್ಥಿತರಿದ್ದರು.

YouTube: https://t.co/xVK0rs9uH3

Facebook: https://t.co/p9g0J6q6qvhttps://t.co/Re8ciUG4dL

— PIB India (@PIB_India) January 16, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...