alex Certify ಮುಗಿಯದ ತಾಂಡವ್​ ವಿವಾದ : ಸೈಫ್​ ಅಲಿ ಖಾನ್​ ನಿವಾಸಕ್ಕೆ ಹೆಚ್ಚಿದ ಪೊಲೀಸ್​ ಭದ್ರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗಿಯದ ತಾಂಡವ್​ ವಿವಾದ : ಸೈಫ್​ ಅಲಿ ಖಾನ್​ ನಿವಾಸಕ್ಕೆ ಹೆಚ್ಚಿದ ಪೊಲೀಸ್​ ಭದ್ರತೆ

ಅಮೆಜಾನ್​ ಪ್ರೈಮ್​​ನಲ್ಲಿ ತೆರೆಕಂಡ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅಭಿನಯದ ʼತಾಂಡವ್ʼ​ ವೆಬ್​ ಸೀರಿಸ್​ ಅನೇಕರ ಕಣ್ಣು ಕೆಂಪಗಾಗಿಸಿದೆ. ಬಿಜೆಪಿ ಶಾಸಕ ರಾಮ್​ ಕದಮ್​​ ಘಾಟ್ಕೋಪರ್​ ಪೊಲೀಸ್​ ಠಾಣೆಯಲ್ಲಿ ತಾಂಡವ್​ ವಿರುದ್ಧ ದೂರನ್ನ ದಾಖಲಿಸಿದ್ದಾರೆ.

ಇತ್ತ ಲಕ್ನೋದಲ್ಲೂ ವೆಬ್​ ಸಿರೀಸ್​ ನಿಮಾರ್ಪಕ ಹಾಗೂ ಅಮೆಜಾನ್​ ಪ್ರೈಮ್​ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಮುಂಬೈನಲ್ಲಿ ನಟ ಸೈಫ್​ ಅಲಿ ಖಾನ್​ ಹಾಗೂ ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ತಾಂಡವ್​ ವಿವಾದ ತಾರಕಕ್ಕೇರುತ್ತಿದ್ದಂತೆ ನಟ ಸೈಫ್​ ಅಲಿ ಖಾನ್​ ನಿವಾಸಕ್ಕೆ ಹೆಚ್ಚುವರಿ ಪೊಲೀಸ್​ ಭದ್ರತೆ ನೀಡಲಾಗಿದೆ. ಸೈಫ್​ ಅಲಿ ಖಾನ್​ ನಿವಾಸದ ಮುಂದೆ ಪೊಲೀಸ್​ ವ್ಯಾನ್​​ಗಳು ಹಾಗೂ ಪೊಲೀಸ್​ ಅಧಿಕಾರಿಗಳು ಇರೋದು ಕಂಡು ಬಂದಿದೆ.

ತಾಂಡವ್​ ವೆಬ್​ ಸಿರೀಸ್​​ನಲ್ಲಿ ವಿವಿಧ ಧರ್ಮ, ಜನಾಂಗಗಳಿಗೆ ನೋವುಂಟು ಮಾಡುವ ಸನ್ನಿವೇಶಗಳಿವೆ. ಈ ಸಿರೀಸ್​ನಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ. ಅಲ್ಲದೇ ಪವಿತ್ರ ಸ್ಥಳಗಳನ್ನ ಅಪವಿತ್ರ ಮಾಡಲಾಗಿದೆ ಎಂಬ ಕಾರಣಕ್ಕೆ ಆಕ್ರೋಶ ಹೆಚ್ಚಾಗಿದೆ.

View this post on Instagram

A post shared by Viral Bhayani (@viralbhayani)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...