ಅಮೆಜಾನ್ ಪ್ರೈಮ್ನಲ್ಲಿ ತೆರೆಕಂಡ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅಭಿನಯದ ʼತಾಂಡವ್ʼ ವೆಬ್ ಸೀರಿಸ್ ಅನೇಕರ ಕಣ್ಣು ಕೆಂಪಗಾಗಿಸಿದೆ. ಬಿಜೆಪಿ ಶಾಸಕ ರಾಮ್ ಕದಮ್ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ತಾಂಡವ್ ವಿರುದ್ಧ ದೂರನ್ನ ದಾಖಲಿಸಿದ್ದಾರೆ.
ಇತ್ತ ಲಕ್ನೋದಲ್ಲೂ ವೆಬ್ ಸಿರೀಸ್ ನಿಮಾರ್ಪಕ ಹಾಗೂ ಅಮೆಜಾನ್ ಪ್ರೈಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂಬೈನಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತಾಂಡವ್ ವಿವಾದ ತಾರಕಕ್ಕೇರುತ್ತಿದ್ದಂತೆ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿದೆ. ಸೈಫ್ ಅಲಿ ಖಾನ್ ನಿವಾಸದ ಮುಂದೆ ಪೊಲೀಸ್ ವ್ಯಾನ್ಗಳು ಹಾಗೂ ಪೊಲೀಸ್ ಅಧಿಕಾರಿಗಳು ಇರೋದು ಕಂಡು ಬಂದಿದೆ.
ತಾಂಡವ್ ವೆಬ್ ಸಿರೀಸ್ನಲ್ಲಿ ವಿವಿಧ ಧರ್ಮ, ಜನಾಂಗಗಳಿಗೆ ನೋವುಂಟು ಮಾಡುವ ಸನ್ನಿವೇಶಗಳಿವೆ. ಈ ಸಿರೀಸ್ನಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ. ಅಲ್ಲದೇ ಪವಿತ್ರ ಸ್ಥಳಗಳನ್ನ ಅಪವಿತ್ರ ಮಾಡಲಾಗಿದೆ ಎಂಬ ಕಾರಣಕ್ಕೆ ಆಕ್ರೋಶ ಹೆಚ್ಚಾಗಿದೆ.
https://www.instagram.com/tv/CKJIQ12nWBB/?utm_source=ig_web_copy_link