![](https://kannadadunia.com/wp-content/uploads/2021/02/Sachin-Reuters.png)
ನಿವೃತ್ತಿ ಜೀವನದ ಬಳಿಕವೂ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದ ಸಚಿನ್ ರೈತ ಪರ ಹೋರಾಟದ ವಿಚಾರದಲ್ಲಿ ಮಾಡಿದ ಒಂದೇ ಒಂದು ಟ್ವೀಟ್ನಿಂದಾಗಿ ಅಭಿಮಾನಿಗಳನ್ನ ಕಳೆದುಕೊಳ್ತಿದ್ದಾರೆ.
ಪಾಪ್ ತಾರೆ ರಿಹನ್ನಾ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿ ನಾವೇಕೆ ಇದರ ಬಗ್ಗೆ ಮಾತನಾಡಬಾರದು..? ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೇ ಪರಿಸರ ಹೋರಾಟಗಾರ್ತಿ ಗ್ರೇಟಾ ಕೂಡ ರೈತರಿಗೆ ಬೆಂಬಲ ಸೂಚಿಸಿ ಟ್ವೀಟಾಯಿಸಿದ್ದರು. ಇದು ಭಾರತೀಯ ಸೆಲೆಬ್ರಿಟಿಗಳನ್ನ ಕೆರಳುವಂತೆ ಮಾಡಿತ್ತು.
ಇದಾದ ಬಳಿಕ ಟ್ವೀಟ್ ಮಾಡಿದ ಸಚಿನ್ ತೆಂಡೂಲ್ಕರ್ ದೇಶದ ಆಂತರಿಕ ಸಮಸ್ಯೆಗಳನ್ನ ಸರಿ ಪಡಿಸೋಕೆ ಬಾಹ್ಯ ಶಕ್ತಿಗಳ ಅವಶ್ಯಕತೆ ಇಲ್ಲ ಎಂದು ಟ್ವೀಟ್ ಮಾಡಿದ್ದರು. ತೆಂಡೂಲ್ಕರ್ ಏಕತೆಯ ಸಂದೇಶ ಸಾರಲು ಯತ್ನಿಸಿದ್ದರೂ ಸಹ ಅದು ರೈತ ಪರವಾಗಿ ಮಾತನಾಡಿದ್ದ ರಿಹನ್ನಾಗೆ ಟಾಂಗ್ ನೀಡಿದ ಟ್ವೀಟ್ ಆಗಿದ್ದರಿಂದ ಕೃಷಿ ಮಸೂದೆ ವಿರೋಧಿಸುವವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.
ಇತ್ತ ಕೇರಳಿಗರು 2014 ಸಂದರ್ಶನವನ್ನ ಇಟ್ಕೊಂಡು ಮಾರಿಯಾ ಶರಪೋವಾ ಬಳಿ ಕ್ಷಮೆ ಯಾಚಿಸ್ತಾ ಇದ್ದರೆ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಸಚಿನ್ ವಿರುದ್ಧ ಟ್ರೋಲ್ಗಳ ಸುರಿಮಳೆಯೇ ಹರಿಯುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಸಚಿನ್ ರೈತರ ವಿರುದ್ಧ ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಲಾಗ್ತಿದೆ.