alex Certify ಅನರ್ಹತೆ ನೋಟಿಸ್: ಸ್ಪೀಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪೈಲಟ್, 18 ಶಾಸಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನರ್ಹತೆ ನೋಟಿಸ್: ಸ್ಪೀಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪೈಲಟ್, 18 ಶಾಸಕರು

Sachin Pilot likely to be sacked from Congress but won't join BJP ...

ಜೈಪುರ್: ರಾಜಸ್ತಾನ ಮಾಜಿ ಡಿಸಿಎಂ ಸಚಿನ್ ಪೈಲಟ್ ಮತ್ತು ಬೆಂಬಲಿಗ 18 ಶಾಸಕರಿಗೆ ಶಾಸಕಾಂಗ ಸಭೆಗೆ ಗೈರು ಹಾಜರಾದ ಹಿನ್ನಲೆ ನೋಟಿಸ್ ನೀಡಲಾಗಿದೆ.

ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸ್ಪೀಕರ್ ನೋಟಿಸ್ ನೀಡಿರುವ ಕ್ರಮ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ ಗೆ ಸಚಿನ್ ಪೈಲಟ್ ಮತ್ತು ಬೆಂಬಲಿಗರು ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್ ನಲ್ಲಿ ಪೈಲಟ್ ಮತ್ತು ಸಂಗಡಿಗರ ಅರ್ಜಿ ವಿಚಾರಣೆ ನಡೆಯಲಿದ್ದು ಸಚಿನ್ ಪೈಲಟ್ ಪರವಾಗಿ ಖ್ಯಾತ ವಕೀಲರಾದ ಹರೀಶ್ ಸಾಳ್ವೆ, ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ.

ಸ್ಪೀಕರ್ ನೋಟಿಸ್ ಸಂವಿಧಾನಾತ್ಮಕವಾಗಿ ಅಮಾನ್ಯವಾಗಿದ್ದು ಅವರ ನೋಟಿಸ್ ರದ್ದುಪಡಿಸಬೇಕೆಂದು ಹೇಳಲಾಗಿದೆ. ವಿಧಾನಸಭೆ ಹೊರಗಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲು ಸಾಧ್ಯವಿಲ್ಲ. ಅನರ್ಹತೆಯ ಬಗ್ಗೆ ಸ್ಪೀಕರ್ ನೀಡಿದ ನೋಟಿಸ್ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ನೋಟಿಸ್ ರದ್ದು ಕೋರಿ ತರಾತುರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಅರ್ಜಿಯಲ್ಲಿ ಕೆಲವು ಮಾರ್ಪಾಡು ಮಾಡಬೇಕು ಎಂದು ಸಚಿನ್ ಪೈಲಟ್ ಪರ ವಕೀಲರು ಮನವಿ ಮಾಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...