ಹರಿಯಾಣದ ರೋಹ್ಟಕ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ರೈಲೊಂದು ಮಹಿಳೆ ಮೇಲೆ ಹರಿದಿದೆ. ಅದೃಷ್ಟವಶಾತ್ ಮಹಿಳೆಗೆ ಏನೂ ಆಗಿಲ್ಲ. ಮಹಿಳೆ ಹಳಿ ಮೇಲೆ ಮಲಗಿ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. ರೈಲು ಹೊರಡುವ ಸಿದ್ಧತೆಯಲ್ಲಿತ್ತು. ಸಿಗ್ನಲ್ ಗಾಗಿ ಕಾಯ್ತಿತ್ತು. ಈ ವೇಳೆ ಮಹಿಳೆ ಹಳಿ ದಾಟಲು ಮುಂದಾಗಿದ್ದಾಳೆ. ಆಗ್ಲೇ ರೈಲು ಹೊರಟಿದೆ. ರೈಲಿನ ಅಡಿಗೆ ಹೋದ ಮಹಿಳೆ ಜೀವ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾಳೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊ ರೋಹ್ಟಕ್ ನ ನ್ಯೂ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ರೈಲ್ವೆ ಗೇಟ್ ನಿಂದ ಹೊರಬಂದಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗೋಹಾನಾದಿಂದ ಸಿಗ್ನಲ್ ಸಿಗದ ಕಾರಣ ಸರಕು ರೈಲು ಗೇಟ್ ಬಳಿ ನಿಂತಿತ್ತು. 62 ವರ್ಷದ ವೃದ್ಧ ಮಹಿಳೆಯೊಬ್ಬಳು ಸರಕು ರೈಲಿನ ಕೆಳಗೆ ಬಂದು ಟ್ರ್ಯಾಕ್ ದಾಟಿದ್ದಾಳೆ. ಈ ಸಮಯದಲ್ಲಿ ರೈಲು ಚಲಿಸಲು ಪ್ರಾರಂಭಿಸಿದೆ.
ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ
ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಚಲಿಸುವ ರೈಲಿನ ಸುತ್ತಲೂ ನಿಂತಿರುವ ಜನರು ಮಹಿಳೆಯನ್ನು ನೆಲಕ್ಕೆ ಅಂಟಿಕೊಂಡು ಮಲಗಲು ಹೇಳುತ್ತಿದ್ದಾರೆ. ರೈಲು ಹೋದ್ಮೇಲೆ ಮಹಿಳೆ ಎದ್ದು ನಿಂತಿದ್ದಾಳೆ.