alex Certify ಮತ್ತೊಂದು ವಿವಾದದ ಕಿಡಿ ಹಚ್ಚಿದ ರಿಹಾನಾ: ಗಣಪತಿ ಪೆಂಡೆಂಟ್ ಧರಿಸಿ ಅರೆ ಬೆತ್ತಲೆ ಪೋಸ್ ನೀಡಿದ ಪಾಪ್ ಗಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಿವಾದದ ಕಿಡಿ ಹಚ್ಚಿದ ರಿಹಾನಾ: ಗಣಪತಿ ಪೆಂಡೆಂಟ್ ಧರಿಸಿ ಅರೆ ಬೆತ್ತಲೆ ಪೋಸ್ ನೀಡಿದ ಪಾಪ್ ಗಾಯಕಿ

ಖ್ಯಾತ ಪಾಪ್ ಗಾಯಕಿ ರಿಹಾನಾ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಾಡಿದ ಟ್ವೀಟ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ರಿಹಾನಾ ಮತ್ತೊಂದು ವಿವಾದದ ಕಿಡಿ ಹಚ್ಚಿದ್ದು, ಹಿಂದೂಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಒಳಉಡುಪಿನ ಪ್ರಚಾರಕ್ಕಾಗಿ ರಿಹಾನಾ ಅರೆಬೆತ್ತಲೆ ಪೋಸ್ ನೀಡಿದ್ದು, ಈ ವೇಳೆ ಆಕೆ ಗಣಪತಿ ಪೆಂಡೆಂಟ್ ಧರಿಸಿರುವುದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲೆಂದೇ ರಿಹಾನಾ ಈ ರೀತಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಲಾಗುತ್ತಿದೆ.

 ಉದ್ಯಮಿ ಬಿ.ಆರ್. ಶೆಟ್ಟಿಗೆ ಬಿಗ್ ಶಾಕ್ –ಎಲ್ಲಾ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

ಕೆಲ ದಿನಗಳ ಹಿಂದಷ್ಟೇ ರಿಹಾನಾ, ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ವೇಳೆ ಇಂಟರ್ನೆಟ್ ಬಂದ್ ಮಾಡಿರುವುದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಸ್ತಾಪಿಸಿ, ಈ ಸಂದರ್ಭದಲ್ಲಿ ಈ ಕುರಿತು ನಾವೇಕೆ ಮಾತನಾಡಬಾರದು ಎಂದು ಹೇಳಿದ್ದರು. ಅವರ ಟ್ವೀಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ ಪರ-ವಿರೋಧದ ಹೇಳಿಕೆಗಳಿಗೆ ಕಾರಣವಾಗಿತ್ತು. ಇದೀಗ ರಿಹಾನಾ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...