alex Certify ಸೋದರಿಗಾಗಿ ಡ್ರಗ್ಸ್ ಖರೀದಿಸಿದ್ದೆ ಎಂದ ಸೋದರ ಅರೆಸ್ಟ್: ನಟಿಯ ಬಂಧನ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋದರಿಗಾಗಿ ಡ್ರಗ್ಸ್ ಖರೀದಿಸಿದ್ದೆ ಎಂದ ಸೋದರ ಅರೆಸ್ಟ್: ನಟಿಯ ಬಂಧನ ಸಾಧ್ಯತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಮುಂದುವರೆರದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸೋದರ ಶೋವಿಕ್ ಚಕ್ರವರ್ತಿ ಸೇರಿ ಇಬ್ಬರನ್ನು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ.

ಮಾದಕ ದ್ರವ್ಯ ಬಳಕೆಯ ಆರೋಪದಡಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡನನ್ನು ಬಂಧಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ತನಿಖೆ ಮುಂದುವರೆದಿದ್ದು, ಶುಕ್ರವಾರ ಎನ್.ಸಿ.ಬಿ. ಅಧಿಕಾರಿಗಳು ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿರುವ ಹಿನ್ನಲೆಯಲ್ಲಿ ದಾಳಿ ಮಾಡಿದ್ದರು.

ಸಹೋದರಿ ರಿಯಾ ಚಕ್ರವರ್ತಿಗಾಗಿ ಬಂಧಿತ ಡ್ರಗ್ ಡೀಲರ್ ಬಸಿತ್ ಪರಿಹಾರ್ ನಿಂದ ಡ್ರಡಗ್ಸ್ ಖರೀದಿಸಿದ್ದಾಗಿ ಶೋವಿಕ್ ಹೇಳಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ರಿಯಾ ಚಕ್ರವರ್ತಿಯನ್ನು ಕೂಡ ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...