ಗೋಸುಂಬೆಯೊಂದು ಮೊಟ್ಟೆಯಿಡುತ್ತಿರುವ ಅತ್ಯಪರೂಪದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಈ ದೃಶ್ಯಾವಳಿಯನ್ನು ಕಣ್ತುಂಬಿಕೊಂಡಿದ್ದಾರೆ.
ಶ್ರೀನಿವಾಸನ್ ಹೆಸರಿನ ಈ ವ್ಯಕ್ತಿ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ತಮ್ಮ ಮನೆಯ ಉದ್ಯಾನದಲ್ಲಿ ಹಾಗೇ ಸುಮ್ಮನೇ ಕ್ಯಾಶುವಲ್ ವಾಕ್‌ಗೆಂದು ಹೊರಟಿದ್ದ ವೇಳೆ ಈ ದೃಶ್ಯಾವಳಿಯನ್ನು ಕಂಡಿದ್ದಾರೆ.
ಇದಕ್ಕೆ ತಕ್ಷಣ ಸ್ಪಂದಿಸಿ, ತಮ್ಮ ಕ್ಯಾಮೆರಾವನ್ನು ಹೊರತೆಗೆದುಕೊಂಡು ಬಂದ ಶ್ರೀನಿವಾಸನ್ ರಮೇಶ್, ಬಿಲವೊಂದರಲ್ಲಿ ಸಣ್ಣ ಮೊಟ್ಟೆಗಳನ್ನು ಇಡುತ್ತಿರುವ ಗೋಸುಂಬೆಯ ವಿಡಿಯೋ ಮಾಡಿಕೊಂಡಿದ್ದಾರೆ. ಚೆನ್ನೈನ ತಾಂಬರಮ್ ಬಳಿ ಈ ಅಪರೂಪದ ಚಿತ್ರವನ್ನು ಸೆರೆ ಹಿಡಿಯಲಾಗಿದೆ.