alex Certify BIG NEWS: ಮೀಸಲಾತಿ ಪರಮ ಪವಿತ್ರವಲ್ಲ, ಪರಿಷ್ಕರಣೆಗೆ ‘ಸುಪ್ರೀಂ’ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೀಸಲಾತಿ ಪರಮ ಪವಿತ್ರವಲ್ಲ, ಪರಿಷ್ಕರಣೆಗೆ ‘ಸುಪ್ರೀಂ’ ಮಹತ್ವದ ಸೂಚನೆ

ನವದೆಹಲಿ: ಮೀಸಲಾತಿ ಎಂಬುದು ಪರಮಪವಿತ್ರವೂ ಅಲ್ಲ, ಬದಲಿಸಬಾರದ್ದೂ ಅಲ್ಲ. ಶ್ರೀಮಂತರನ್ನು ಹೊರಗಿಟ್ಟು ಮೀಸಲಾತಿ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು.

ಹೀಗೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮೀಸಲಾತಿಯಲ್ಲಿ ಶ್ರೀಮಂತರನ್ನು ಹೊರಗಿಟ್ಟು ನೆರವಿನ ಅಗತ್ಯವಿರುವವರನ್ನು ಹೊಸದಾಗಿ ಸೇರಿಸುವ ಮೂಲಕ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕೆಂದು ಸೂಚಿಸಲಾಗಿದೆ.

ಮೀಸಲಾತಿ ಎನ್ನುವುದು ಪರಮಪವಿತ್ರವಾದುದೂ ಅಲ್ಲ, ಬದಲಿಸಬಾರದ್ದೂ ಅಲ್ಲ. ಮೀಸಲಾತಿಯನ್ನು ಪಡೆದ ಸಮುದಾಯಗಳಲ್ಲಿ ಎಲ್ಲರಿಗೂ ಅದರ ಲಾಭ ಸಿಗದಿರುವ ಬಗ್ಗೆ ಅವಕಾಶವಂಚಿತರಲ್ಲಿ ಅಸಮಾಧಾನ ಇದೆ ಎಂದು ಹೇಳಿದೆ.

ಆಂಧ್ರಪ್ರದೇಶದಲ್ಲಿ 20 ವರ್ಷಗಳ ಹಿಂದೆ ಗುಡ್ಡಗಾಡು ಪ್ರದೇಶಗಳಿಗೆ ಪರಿಶಿಷ್ಟ ಪಂಗಡದ ಶಿಕ್ಷಕರನ್ನು ಮಾತ್ರ ನೇಮಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಅಂದಿನ ಸರ್ಕಾರ ಮೀಸಲಾತಿಯ ಪ್ರಮಾಣವನ್ನು ಶೇಕಡ 50 ಕ್ಕಿಂತ ಹೆಚ್ಚಿಸಿದ ಕ್ರಮವನ್ನು ಸುಪ್ರೀಂಕೋರ್ಟ್ ಐವರು ಸದಸ್ಯರ ಪೀಠ ಮೀಸಲಾತಿ ಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ಮೀಸಲಾತಿ ಲಾಭವನ್ನು ಕೆಲ ಸಮುದಾಯಗಳು ಪಡೆದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಬಂದಿವೆ. ಆದರೆ ಸಮುದಾಯದ ಒಳಗೆ ಎಲ್ಲರಿಗೂ ಲಾಭ ದೊರೆತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...