alex Certify BIG NEWS: ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಕುರಿತಂತೆ ಯುಜಿಸಿಯಿಂದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಕುರಿತಂತೆ ಯುಜಿಸಿಯಿಂದ ಮಹತ್ವದ ನಿರ್ಧಾರ

ನವೆಂಬರ್​ 30,2020ರ ಒಳಗಾಗಿ ದಾಖಲಾತಿ ವಾಪಸ್​ ಪಡೆದ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವನ್ನ ವಾಪಸ್​ ನೀಡಲು ಯುಜಿಸಿ ನಿರ್ಧರಿಸಿದೆ. ಕೋವಿಡ್​ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಯುಜಿಸಿ ಈ ವಿಶೇಷ ನಿರ್ಧಾರವನ್ನ ಕೈಗೊಂಡಿದೆ.

ಒಂದು ವೇಳೆ ವಿದ್ಯಾರ್ಥಿ ಡಿಸೆಂಬರ್​ 1ರಿಂದ ಡಿಸೆಂಬರ್​ 31ರ ಒಳಗೆ ದಾಖಲಾತಿ ವಾಪಸ್​ ಪಡೆದ ವಿದ್ಯಾರ್ಥಿಗಳಿಗೆ 1000 ರೂಪಾಯಿ ಒಳಗಿನ ಮೊತ್ತವನ್ನ ಸಂಸ್ಕರಣಾ ಶುಲ್ಕವಾಗಿ ಕತ್ತರಿಸಿ ಉಳಿದ ಮೊತ್ತವನ್ನ ನೀಡೋದಾಗಿ ಹೇಳಿದೆ.

ಲಾಕ್ಡೌನ್ನ್​ ಹಾಗೂ ಕೊರೊನಾ ವೈರಸ್​ನಿಂದಾಗಿ ಅನೇಕ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನವೆಂಬರ್​ 30ರ ಒಳಗೆ ದಾಖಲಾತಿ ವಾಪಸ್​ ಪಡೆದ್ರೆ ಅಂತಹ ವಿದ್ಯಾರ್ಥಿಯ ಒಂದು ರೂಪಾಯಿಯನ್ನೂ ಯುಜಿಸಿ ಉಳಿಸಿಕೊಳ್ಳೋದಿಲ್ಲ.

ಆದರೆ ಡಿಸೆಂಬರ್​ನಲ್ಲಿ ದಾಖಲಾತಿ ವಾಪಸ್​ ಪಡೆದರೆ ಅಂತ ವಿದ್ಯಾರ್ಥಿಗಳಿಗೆ ಸಂಸ್ಕರಣಾ ಶುಲ್ಕ ಕಡಿತವಾಗಲಿದೆ. ಆದರೆ ಈ ಸಂಸ್ಕರಣ ಶುಲ್ಕ 1000 ರೂಪಾಯಿ ಮೀರೋದಿಲ್ಲ ಎಂದು ಯುಜಿಸಿ ಸ್ಪಷ್ಟನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...