ನವೆಂಬರ್ 30,2020ರ ಒಳಗಾಗಿ ದಾಖಲಾತಿ ವಾಪಸ್ ಪಡೆದ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವನ್ನ ವಾಪಸ್ ನೀಡಲು ಯುಜಿಸಿ ನಿರ್ಧರಿಸಿದೆ. ಕೋವಿಡ್ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಯುಜಿಸಿ ಈ ವಿಶೇಷ ನಿರ್ಧಾರವನ್ನ ಕೈಗೊಂಡಿದೆ.
ಒಂದು ವೇಳೆ ವಿದ್ಯಾರ್ಥಿ ಡಿಸೆಂಬರ್ 1ರಿಂದ ಡಿಸೆಂಬರ್ 31ರ ಒಳಗೆ ದಾಖಲಾತಿ ವಾಪಸ್ ಪಡೆದ ವಿದ್ಯಾರ್ಥಿಗಳಿಗೆ 1000 ರೂಪಾಯಿ ಒಳಗಿನ ಮೊತ್ತವನ್ನ ಸಂಸ್ಕರಣಾ ಶುಲ್ಕವಾಗಿ ಕತ್ತರಿಸಿ ಉಳಿದ ಮೊತ್ತವನ್ನ ನೀಡೋದಾಗಿ ಹೇಳಿದೆ.
ಲಾಕ್ಡೌನ್ನ್ ಹಾಗೂ ಕೊರೊನಾ ವೈರಸ್ನಿಂದಾಗಿ ಅನೇಕ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನವೆಂಬರ್ 30ರ ಒಳಗೆ ದಾಖಲಾತಿ ವಾಪಸ್ ಪಡೆದ್ರೆ ಅಂತಹ ವಿದ್ಯಾರ್ಥಿಯ ಒಂದು ರೂಪಾಯಿಯನ್ನೂ ಯುಜಿಸಿ ಉಳಿಸಿಕೊಳ್ಳೋದಿಲ್ಲ.
ಆದರೆ ಡಿಸೆಂಬರ್ನಲ್ಲಿ ದಾಖಲಾತಿ ವಾಪಸ್ ಪಡೆದರೆ ಅಂತ ವಿದ್ಯಾರ್ಥಿಗಳಿಗೆ ಸಂಸ್ಕರಣಾ ಶುಲ್ಕ ಕಡಿತವಾಗಲಿದೆ. ಆದರೆ ಈ ಸಂಸ್ಕರಣ ಶುಲ್ಕ 1000 ರೂಪಾಯಿ ಮೀರೋದಿಲ್ಲ ಎಂದು ಯುಜಿಸಿ ಸ್ಪಷ್ಟನೆ ನೀಡಿದೆ.