alex Certify ರಸ್ತೆಯಲ್ಲಿ ಹುಲಿ ಮರಿಗಳ ಚಿನ್ನಾಟದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಹುಲಿ ಮರಿಗಳ ಚಿನ್ನಾಟದ ವಿಡಿಯೋ ವೈರಲ್

ದುದ್ವಾ (ಉತ್ತರ ಪ್ರದೇಶ): ಹುಲಿಯೊಂದು ತನ್ನ ಐದು ಮರಿಗಳ ಜತೆ ಆಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಉತ್ತರ ಭಾಗದ ನ್ಯಾಷನಲ್ ಪಾರ್ಕ್ ನಲ್ಲಿನ‌ ವಿಡಿಯೋ ಇದಾಗಿದ್ದು, ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ತಾಯಿ ಹುಲಿ ತನ್ನ ಐದು ಮರಿಗಳೊಂದಿಗೆ – ಉತ್ತರ ಭಾರತದ ಎಲ್ಲ ವನ್ಯಜೀವಿಗಳಲ್ಲಿ ಖುಷಿಯ ವಿಚಾರ” ಎಂದು ಅವರು ವಿಡಿಯೋದ ಜತೆ ಬರೆದಿದ್ದಾರೆ. ಕಾಡಿನ ನಡುವೆ ರಸ್ತೆಯಂತಿರುವ ಜಾಗದಲ್ಲಿ ತಾಯಿ ಹುಲಿ ವಿಶ್ರಾಂತಿ ಪಡೆಯುತ್ತಿದ್ದರೆ ಮರಿಗಳು ಅದರ ಸುತ್ತ ಓಡಾಡುತ್ತ ಆಟವಾಡುತ್ತಿರುವ ವಿಡಿಯೊ ಇದಾಗಿದೆ.

ನಂತರ ಹುಲಿ, ಮರಿಗಳ ಜತೆ ಕಾಡಿನೊಳಗೆ ಹೋಗುತ್ತದೆ. ಈ ವಿಡಿಯೋದಲ್ಲಿ ಕಾಡಿನ ಹಕ್ಕಿಗಳ ಕಲರವ, ಕಪ್ಪೆಗಳ ಕೂಗಾಟದ ಆಹ್ಲಾದಕರ ಶಬ್ಧವನ್ನೂ ಕೇಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...