ಫ್ಯೂಶನ್ ಫುಡ್ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಟ್ರೆಂಡ್ ಆಗಿಬಿಟ್ಟಿದೆ. ಪಾಶ್ಚಾತ್ಯ-ಪೂರ್ವಾತ್ಯ ಖಾದ್ಯಗಳನ್ನು ಒಂದೆಡೆ ಸೇರಿಸಿ ಹೊಸ ಹೈಬ್ರಿಡ್ ಐಟಮ್‌ಗಳನ್ನು ತಯಾರಿಸುವುದು ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ.
ನುಟೆಲ್ಲಾ ಬಿರಿಯಾನಿ, ಓರಿಯೋ ಐಸ್‌ಕ್ರೀಂ ಸಮೋಸಾ ಎಂಬೆಲ್ಲಾ ಚಿತ್ರ ವಿಚಿತ್ರ ಹೆಸರುಗಳೆಲ್ಲಾ ಇತ್ತೀಚೆಗೆ ಭಾರೀ ಸದ್ದು ಮಾಡಲು ಆರಂಭಿಸಿವೆ.
ಇವುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವ ’ರೆಡ್ ಸಾಸ್ ಪಾಸ್ತಾ ದೋಸಾ’ ಎಂಬ ಹೊಸ ಫ್ಯೂಶನ್ ಫುಡ್ ಒಂದರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೇಳಲಾರಂಭಿಸಿದೆ. ದಕ್ಷಿಣ ಭಾರತ ಹಾಗೂ ಇಟಾಲಿಯನ್ ಕ್ಲಾಸಿಕ್ ಶೈಲಿಯನ್ನು ಬೆಸೆದು ಈ ಹೈಬ್ರಿಡ್ ದೋಸೆಯನ್ನು ಸಿದ್ಧಪಡಿಸಲಾಗಿದೆ.