ಓಡಿಶಾದ 6 ನೇ ತರಗತಿ ಬಾಲಕಿ 10 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿ ತನ್ನ ತಂದೆ ವಿರುದ್ಧವೇ ದೂರು ದಾಖಲಿಸುವ ಮೂಲಕ ತನ್ನ ಹಕ್ಕಿಗಾಗಿ ಹೋರಾಡಿದ್ದಾಳೆ.
ಲಾಕ್ಡೌನ್ ಅವಧಿ ಶುರುವಾದಾಗಿನಿಂದ ಓಡಿಶಾ ಸರ್ಕಾರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನಿತ್ಯ 8 ರೂಪಾಯಿಯಂತೆ ಹಣ ಠೇವಣಿ ಇಡುತ್ತಿದೆ. ವಿದ್ಯಾರ್ಥಿಗಳ ಬಳಿ ಬ್ಯಾಂಕ್ ಖಾತೆ ಇರದಿದ್ದರೆ ಅವರ ಪೋಷಕರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ವಿದ್ಯಾರ್ಥಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನಿತ್ಯ 150 ಗ್ರಾಂ ಅಕ್ಕಿ ಪೂರೈಸಲಾಗಿತ್ತಿತ್ತು.
ಇದೀಗ ಈ ಯೋಜನೆ ಸಂಬಂಧ ಕೇಂದ್ರಪಾದದ ಬಾಲಕಿ ಕಲೆಕ್ಟರ್ ಸಮರ್ಥ್ ವರ್ಮಾರಿಗೆ ದೂರನ್ನ ನೀಡಿದ್ದಾಳೆ. ದೂರನ್ನ ಸ್ವೀಕರಿಸಿದ ಸಮರ್ಥ್ ಕುಮಾರ್, ಇನ್ನು ಮುಂದಿದ ಹಣವನ್ನ ವಿದ್ಯಾರ್ಥಿನಿಯ ಬ್ಯಾಂಕ್ ಖಾತೆಗೆ ಹಾಕಬೇಕು. ಹಾಗೂ ಈವರೆಗೆ ತಂದೆ ಆಕೆಗೆ ನೀಡದೇ ಅಕ್ರಮವಾಗಿ ಬಳಕೆ ಮಾಡಿದ ಹಣ ಹಾಗೂ ಅಕ್ಕಿಯನ್ನ ವಿದ್ಯಾರ್ಥಿನಿಗೆ ವಾಪಸ್ ನೀಡಬೇಕು ಅಂತಾ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿನಿಯ ಜೊತೆ ಇರದ ಆಕೆಯ ತಂದೆ, ಆಕೆ ಬಳಿ ಬ್ಯಾಂಕ್ ಖಾತೆ ಇದ್ದರೂ ಸಹ ತನ್ನ ಖಾತೆ ನಂಬರ್ ನೀಡಿ ಅಕ್ರಮವಾಗಿ ಹಣ ಪಡೆದುಕೊಳ್ತಿದ್ದ ಹಾಗೂ ತನಗೆ ಬರಬೇಕಾದ ಅಕ್ಕಿಯನ್ನ ತಂದೆಯೇ ಬಳಕೆ ಮಾಡಿಕೊಳ್ಳುತ್ತಿದ್ದಾನೆ ಅಂತಾ ಬಾಲಕಿ ದೂರನ್ನ ಸಲ್ಲಿಸಿದ್ದಳು.