ದೇಶಾದ್ಯಂತ ನವರಾತ್ರಿ ಸಂಭ್ರಮ ಕೊನೆಗೊಂಡಿದೆ. ಪಂಜಾಬ್ನಲ್ಲಿ ನವರಾತ್ರಿ ಹಬ್ಬದ ಮುಕ್ತಾಯದ ದಿನದಂದು ರಾವಣನ ದಹನ ಮಾಡುವ ವೇಳೆ ಅಗ್ನಿ ಅವಘಡ ಸಂಭವಿಸಿದೆ.
ಪಂಜಾಬ್ ರಾಜ್ಯದ ಬಟಾಲಾದ ಶಾಲೆಯೊಂದರ ಮೈದಾನದಲ್ಲಿ ರಾವಣನ ದಹನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರೆಲ್ಲ ಸೇರಿ ರಾವಣನಿಗೆ ಅಗ್ನಿಸ್ಪರ್ಶ ಮಾಡ್ತಿದ್ದಂತೆ ಅದರೊಳಗಿದ್ದ ಪಟಾಕಿ ಸ್ಫೋಟಗೊಂಡಿದೆ. ಕೂಡಲೇ ಸ್ಥಳದಲ್ಲಿ ನೆರೆದಿದ್ದ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮೂಲಗಳ ಪ್ರಕಾರ ಈ ರಾವಣ ದಹನ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಅಶ್ವನಿ ಸೇಖ್ರಿ ನೇತೃತ್ವದಲ್ಲಿ ನಡೆಸಲಾಗಿತ್ತು ಅಂತಾ ತಿಳಿದು ಬಂದಿದೆ.