alex Certify ಒಂದು ಕೋಟಿ ರೂ. ನಷ್ಟಕ್ಕೆ ಕಾರಣವಾಯ್ತು ಪುಟ್ಟ ಇಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕೋಟಿ ರೂ. ನಷ್ಟಕ್ಕೆ ಕಾರಣವಾಯ್ತು ಪುಟ್ಟ ಇಲಿ…!

Rat Caught on CCTV Starts Fire in Hyderabad Office, Causes Damage ...

ಈ ಇಲಿಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡುತ್ತವೆ ಎಂದು ನಾವು ಸಾಕಷ್ಟು ಕಡೆಗಳಲ್ಲಿ ನೋಡಿದ್ದೇವೆ. ಕಚೇರಿಗಳು, ಮನೆಗಳು ಹಾಗೂ ಅಂಗಡಿಗಳಲ್ಲೆಲ್ಲಾ ಇವುಗಳ ದಾಂಧಲೆ ವಿಪರೀತವಾದದ್ದು.

ಹೈದರಾಬಾದ್‌ನ ಕಚೇರಿಯೊಂದರಲ್ಲಿ ದೊಡ್ಡ ಮಟ್ಟದಲ್ಲಿ ಅಗ್ನಿ ಅವಘಡ ಸೃಷ್ಟಿಯಾದ ವಿಚಾರವೊಂದು ಸುದ್ದಿ ಮಾಡಿತ್ತು. ಇಲ್ಲಿನ ಮುಶೀರಾಬಾದ್‌ನಲ್ಲಿರುವ ಮಿತ್ರಾ ಮೋಟರ್ಸ್‌ನಲ್ಲಿ ಘಟಿಸಿದ ಈ ಅವಘಡಕ್ಕೆ ಕಾರಣಕರ್ತರು ಯಾರೆಂದು ಈಗ ತಿಳಿದುಬಂದಿದೆ.

ಆರು ತಿಂಗಳ ಹಿಂದೆ ಘಟಿಸಿದ ಈ ಘಟನೆಯಲ್ಲಿ ಮಧ್ಯರಾತ್ರಿ ವೇಳೆ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಒಟ್ಟಾರೆ ಒಂದು ಕೋಟಿ ರೂ.ಗಳಷ್ಟು ಆಸ್ತಿಗೆ ಹಾನಿಯಾಗಿದೆ. ಇಲ್ಲಿವರೆಗೂ ಶಾರ್ಟ್ ಸರ್ಕೀಟ್ ಕಾರಣದಿಂದ ಹೀಗೆ ಆಗಿದೆ ಎಂದು ಮಾಲೀಕರು ಅಂದುಕೊಂಡಿದ್ದರು.

ಆದರೆ ಇತ್ತೀಚೆಗೆ ಸಿಸಿಟಿವಿ ದೃಶ್ಯಾವಳಿಯೊಂದು ಬಿಡುಗಡೆಯಾಗಿದ್ದು, ಒಂದು ಪುಟ್ಟ ಇಲಿ ಯಾವ ಮಟ್ಟದಲ್ಲಿ ಡ್ಯಾಮೇಜ್ ಮಾಡಬಲ್ಲದು ಎಂದು ನೀವೆ ಒಮ್ಮೆ ನೋಡಿ ತಿಳಿದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...