
ಈ ಇಲಿಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡುತ್ತವೆ ಎಂದು ನಾವು ಸಾಕಷ್ಟು ಕಡೆಗಳಲ್ಲಿ ನೋಡಿದ್ದೇವೆ. ಕಚೇರಿಗಳು, ಮನೆಗಳು ಹಾಗೂ ಅಂಗಡಿಗಳಲ್ಲೆಲ್ಲಾ ಇವುಗಳ ದಾಂಧಲೆ ವಿಪರೀತವಾದದ್ದು.
ಹೈದರಾಬಾದ್‌ನ ಕಚೇರಿಯೊಂದರಲ್ಲಿ ದೊಡ್ಡ ಮಟ್ಟದಲ್ಲಿ ಅಗ್ನಿ ಅವಘಡ ಸೃಷ್ಟಿಯಾದ ವಿಚಾರವೊಂದು ಸುದ್ದಿ ಮಾಡಿತ್ತು. ಇಲ್ಲಿನ ಮುಶೀರಾಬಾದ್‌ನಲ್ಲಿರುವ ಮಿತ್ರಾ ಮೋಟರ್ಸ್‌ನಲ್ಲಿ ಘಟಿಸಿದ ಈ ಅವಘಡಕ್ಕೆ ಕಾರಣಕರ್ತರು ಯಾರೆಂದು ಈಗ ತಿಳಿದುಬಂದಿದೆ.
ಆರು ತಿಂಗಳ ಹಿಂದೆ ಘಟಿಸಿದ ಈ ಘಟನೆಯಲ್ಲಿ ಮಧ್ಯರಾತ್ರಿ ವೇಳೆ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಒಟ್ಟಾರೆ ಒಂದು ಕೋಟಿ ರೂ.ಗಳಷ್ಟು ಆಸ್ತಿಗೆ ಹಾನಿಯಾಗಿದೆ. ಇಲ್ಲಿವರೆಗೂ ಶಾರ್ಟ್ ಸರ್ಕೀಟ್ ಕಾರಣದಿಂದ ಹೀಗೆ ಆಗಿದೆ ಎಂದು ಮಾಲೀಕರು ಅಂದುಕೊಂಡಿದ್ದರು.
ಆದರೆ ಇತ್ತೀಚೆಗೆ ಸಿಸಿಟಿವಿ ದೃಶ್ಯಾವಳಿಯೊಂದು ಬಿಡುಗಡೆಯಾಗಿದ್ದು, ಒಂದು ಪುಟ್ಟ ಇಲಿ ಯಾವ ಮಟ್ಟದಲ್ಲಿ ಡ್ಯಾಮೇಜ್ ಮಾಡಬಲ್ಲದು ಎಂದು ನೀವೆ ಒಮ್ಮೆ ನೋಡಿ ತಿಳಿದುಕೊಳ್ಳಿ.
https://twitter.com/aditya_gona/status/1296659969786273792?ref_src=twsrc%5Etfw%7Ctwcamp%5Etweetembed%7Ctwterm%5E1296659969786273792%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Frat-caught-on-cctv-starts-fire-in-hyderabad-office-causes-damage-worth-rs-1-crore-2807037.html