alex Certify 2020ರಲ್ಲಿ ಅತಿ ಹೆಚ್ಚು ವೈರಲ್​ ಆದ ವಿಡಿಯೋಗಳು ಯಾವುವು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ರಲ್ಲಿ ಅತಿ ಹೆಚ್ಚು ವೈರಲ್​ ಆದ ವಿಡಿಯೋಗಳು ಯಾವುವು ಗೊತ್ತಾ…?

ಕಳೆದ ಅನೇಕ ವರ್ಷಗಳಿಗೆ ಹೋಲಿಸಿದ್ರೆ 2020ನೇ ಇಸ್ವಿ ಸಂತಸದ ಸುದ್ದಿಯನ್ನ ನೀಡಿದ್ದಕ್ಕಿಂತ ಜಾಸ್ತಿ ಕಹಿ ಸುದ್ದಿಯನ್ನೇ ನೀಡಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕುಟುಂಬಸ್ಥರಿಂದ ದೂರಾಗಿದ್ದಾರೆ. ಹಲವರು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಜಾಗತಿಕ ಸಾಂಕ್ರಾಮಿಕದ ನಡುವೆಯೇ ಈ ಬಾರಿ ಜನರು ಅತಿ ಹೆಚ್ಚು ಸಾಮಾಜಿಕ ಮಾಧ್ಯಮಕ್ಕೆ ಅವಲಂಬಿತರಾಗಿದ್ದಂತೂ ನಿಜ. ಹಾಗಾದ್ರೆ ಈ ವರ್ಷ ಅತೀ ಹೆಚ್ಚು ಮನರಂಜನೆ ನೀಡಿದ ವೈರಲ್​ ವಿಡಿಯೋಗಳು ಯಾವುದು ಎಂಬುದನ್ನ ನೋಡೊಣ.

ಗೋ ಕೊರೊನಾ ಗೋ : ಮಾರ್ಚ್​ ತಿಂಗಳಲ್ಲಿ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಗೋ ಕೊರೊನಾ ಗೋ ಎಂಬ ಪದವನ್ನ ಮಂತ್ರದ ರೀತಿಯಲ್ಲಿ ಪಠಿಸಿದ್ದರು. ಈ ವಿಡಿಯೋ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೈರಲ್​ ಆದ ವಿಡಿಯೋವಾಗಿದೆ.

ರಸೋಡೇ ಮೇ ಕೌನ್​ ಥಾ : ಸಂಗೀತ ನಿರ್ದೇಶಕ ಯಶ್​ರಾಜ್​ ಮುಖಾಟೆ ಎಂಬವರು ಸಾಥ್​ ನಿಭಾನಾ ಸಾಥಿಯಾ ಎಂಬ ಧಾರವಾಹಿಯ ದೃಶ್ಯವನ್ನ ಬಳಸಿಕೊಂಡು ಸಂಗೀತ ರಚಿಸುವ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಫೇಮಸ್ ಆಗಿದ್ದರು.

ಫಿಲಿಫೈನ್ಸ್​ನ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪತ್ರಕರ್ತೆ ಡೋರಿಸ್​ ಬಿಗೋರಿನಿಯಾ ಭಾಗಿಯಾಗಿದ್ದ ವೇಳೆ 2 ಬೆಕ್ಕುಗಳು ಹೊಡೆದಾಡಿಕೊಂಡ ದೃಶ್ಯವೂ ಸೆರೆಯಾಗಿತ್ತು. ಈ ವಿಡಿಯೋ ಕೂಡ ಇಂಟರ್ನೆಟ್​ನಲ್ಲಿ ಹಲ್​ಚಲ್​ ಎಬ್ಬಿಸಿತ್ತು.

ಇನ್ನುಳಿದಂತೆ ಲಾಕ್​ಡೌನ್​ ಸಂದರ್ಭದಲ್ಲಿ ಪೊಲೀಸರು ನೀಡಿದ ಶಿಕ್ಷೆಗಳ ವಿಡಿಯೋ, ಕಾಕು ಎಂಬ ಮನೆಗೆಲಸದಾಕೆ ತನ್ನ ಸಂಬಳಕ್ಕಾಗಿ ಜಗಳವಾಡಿದ್ದು ಸೇರಿದಂತೆ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ.

— Santosh Addagulla (@santoshspeed) March 10, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...