
ಜಾಗತಿಕ ಸಾಂಕ್ರಾಮಿಕದ ನಡುವೆಯೇ ಈ ಬಾರಿ ಜನರು ಅತಿ ಹೆಚ್ಚು ಸಾಮಾಜಿಕ ಮಾಧ್ಯಮಕ್ಕೆ ಅವಲಂಬಿತರಾಗಿದ್ದಂತೂ ನಿಜ. ಹಾಗಾದ್ರೆ ಈ ವರ್ಷ ಅತೀ ಹೆಚ್ಚು ಮನರಂಜನೆ ನೀಡಿದ ವೈರಲ್ ವಿಡಿಯೋಗಳು ಯಾವುದು ಎಂಬುದನ್ನ ನೋಡೊಣ.
ಗೋ ಕೊರೊನಾ ಗೋ : ಮಾರ್ಚ್ ತಿಂಗಳಲ್ಲಿ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಗೋ ಕೊರೊನಾ ಗೋ ಎಂಬ ಪದವನ್ನ ಮಂತ್ರದ ರೀತಿಯಲ್ಲಿ ಪಠಿಸಿದ್ದರು. ಈ ವಿಡಿಯೋ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೈರಲ್ ಆದ ವಿಡಿಯೋವಾಗಿದೆ.
ರಸೋಡೇ ಮೇ ಕೌನ್ ಥಾ : ಸಂಗೀತ ನಿರ್ದೇಶಕ ಯಶ್ರಾಜ್ ಮುಖಾಟೆ ಎಂಬವರು ಸಾಥ್ ನಿಭಾನಾ ಸಾಥಿಯಾ ಎಂಬ ಧಾರವಾಹಿಯ ದೃಶ್ಯವನ್ನ ಬಳಸಿಕೊಂಡು ಸಂಗೀತ ರಚಿಸುವ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಫೇಮಸ್ ಆಗಿದ್ದರು.
ಫಿಲಿಫೈನ್ಸ್ನ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪತ್ರಕರ್ತೆ ಡೋರಿಸ್ ಬಿಗೋರಿನಿಯಾ ಭಾಗಿಯಾಗಿದ್ದ ವೇಳೆ 2 ಬೆಕ್ಕುಗಳು ಹೊಡೆದಾಡಿಕೊಂಡ ದೃಶ್ಯವೂ ಸೆರೆಯಾಗಿತ್ತು. ಈ ವಿಡಿಯೋ ಕೂಡ ಇಂಟರ್ನೆಟ್ನಲ್ಲಿ ಹಲ್ಚಲ್ ಎಬ್ಬಿಸಿತ್ತು.
ಇನ್ನುಳಿದಂತೆ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ನೀಡಿದ ಶಿಕ್ಷೆಗಳ ವಿಡಿಯೋ, ಕಾಕು ಎಂಬ ಮನೆಗೆಲಸದಾಕೆ ತನ್ನ ಸಂಬಳಕ್ಕಾಗಿ ಜಗಳವಾಡಿದ್ದು ಸೇರಿದಂತೆ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ.
https://twitter.com/i/status/1300091650149023744