alex Certify ಅಪರೂಪದ ನೀಲಗಿರಿ ಮಾರ್ಟನ್​ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ನೀಲಗಿರಿ ಮಾರ್ಟನ್​ ಪತ್ತೆ

ಅಳಿವಿನಂಚಿಲ್ಲಿರುವ ನೀಲಗಿರಿ ಮಾರ್ಟನ್​​ ಪ್ರಾಣಿ ಕ್ಯಾಮರಾ ಕಣ್ಣಿಗೆ ಪತ್ತೆಯಾಗಿದೆ. ಪ್ರವಾಸಿಗರು ಚಿತ್ರೀಕರಿಸಿದ ವಿಡಿಯೋವನ್ನ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಪೋಸ್ಟ್ ಮಾಡಿದ್ದಾರೆ. ಇದು ಯಾವ ಸ್ಥಳದಲ್ಲಿ ಪತ್ತೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ .

ನೀಲಗಿರಿ ಮಾರ್ಟನ್​ ಎಂಬ ಪ್ರಾಣಿ ಪಶ್ಚಿಮ ಘಟ್ಟದ ಕಾಡುಗಳು ಹಾಗೂ ಹುಲ್ಲುಗಾವಲು ಪ್ರದೇಶದಲ್ಲಿ ಕಂಡುಬರುತ್ತೆ. ಈ ಪ್ರಾಣಿಯ ವಿಡಿಯೋ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಸುಪ್ರಿಯಾ ಸಾಹು ಇದರ ಕೆಲವು ವಿಶಿಷ್ಟ ಗುಣಲಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಇದು ಸಸ್ತನಿ ಜಾತಿಗೆ ಸೇರಿದ ಪ್ರಾಣಿ. ಪ್ರಕಾಶಮಾನವಾದ ಹಳದಿ ಗಂಟಲು ಹಾಗೂ ಕಂದು ಬಣ್ಣದ ದಪ್ಪ ಚರ್ಮವನ್ನ ಹೊಂದಿದೆ ಅಂತಾ ಬರೆದುಕೊಂಡಿದ್ದಾರೆ.

ಸುಪ್ರಿಯಾ ಈ ಪ್ರಾಣಿಯ ವಿಡಿಯೋ ಪೋಸ್ಟ್ ಮಾಡ್ತಿದ್ದಂತೆ ಅನೇಕರು ಲೈಕ್​ ಹಾಗೂ ಕಮೆಂಟ್​ಗಳನ್ನ ಮಾಡಿದ್ದಾರೆ. ನೆಟ್ಟಿಗರೊಬ್ಬರು ಇದು ಬಹಳ ಅಪರೂಪದ ಪ್ರಾಣಿ ಅಂತಾ ಹೇಳಿದ್ರೆ ಇನ್ನೂ ಹಲವರು ಪ್ರಕೃತಿ ಅಪರೂಪದ ವಿನ್ಯಾಸಗಳನ್ನು ಸೃಷ್ಟಿಸುತ್ತೆ ಅಂತಾ ಬರೆದಿದ್ದಾರೆ.

ದಕ್ಷಿಣ ಭಾರತದ ಅದರಲ್ಲೂ ಮುಖ್ಯವಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಶೋಲಾ ಹುಲ್ಲುಗಾವಲು ಮತ್ತು ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಈ ನೀಲಗಿರಿ ಮಾರ್ಟನ್ಸ್ ಕಂಡು ಬರುತ್ತೆ. ಇದು ಸರ್ವಭಕ್ಷಕ ಪ್ರಾಣಿಯಾಗಿದ್ದು ಸಣ್ಣ ಸಸ್ತನಿ, ಕೀಟ ಹಾಗೂ ಸಣ್ಣ ಪಕ್ಷಿಗಳನ್ನ ಬೇಟೆಯಾಡಿ ತಿನ್ನುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...