ಚಿನ್ನದ ಬಣ್ಣದ ಆಮೆಯೊಂದು ಪತ್ತೆಯಾಗಿದ್ದು, ವಿಷ್ಣುವಿನ ಅವತಾರ ಎಂದು ಜನರು ನಂಬಿಕೊಂಡಿರುವ ಪ್ರಸಂಗ ನೇಪಾಳದಲ್ಲಿ ನಡೆದಿದೆ.
ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ಪ್ರಕಾರ, ಆಮೆಯು ಭಾರತೀಯ ಫ್ಲಾಪ್‌ಶೆಲ್ ಆಮೆ ಅಥವಾ ಲಿಸ್ಸೆಮಿಸ್ ಪಂಕ್ಟಾಟಾ ಆಂಡರ್ಸೋನಿ ಎಂದು ಗುರುತಿಸಲಾಗಿದೆ.
ಆಮೆ ತನ್ನ ಬೆರಗುಗೊಳಿಸುವ ಚಿನ್ನದ ಬಣ್ಣದ ಚಿಪ್ಪಿನ ಸ್ಥಿತಿಯನ್ನು ಕ್ರೊಮ್ಯಾಟಿಕ್ ಲ್ಯೂಸಿಸಮ್ ಎಂದು ಕರೆಯಲಾಗುತ್ತದೆ. ಲಿಸ್ಸೆಮಿಸ್ ಪಂಕ್ಟಾಟಾ ಆಂಡರ್ಸೋನಿ ಪ್ರಭೇದದ ಚಿನ್ನದ ಆಮೆ ನೇಪಾಳದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ ಎನ್ನಲಾಗಿದೆ. ಇದನ್ನು ಧನುಷಾಧಮ್ ಸಂರಕ್ಷಿತ ಅರಣ್ಯದ ಪ್ರಾಣಿ ಪಾಲಕ ಚಂದ್ರದೀಪ್ ರಕ್ಷಿಸಿದ್ದು, ಈ ವಿಚಾರ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ.
https://www.facebook.com/mithilawildlifetrust/posts/3009229822532242