ಬಹಳ ಅಪರೂಪವಾಗಿ ಕಾಣಿಸುವ ಕಪ್ಪು ಚಿರತೆಯೊಂದು ಜಿಂಕೆ ಬೇಟೆಯಾಡುತ್ತಿರುವ ಚಿತ್ರವನ್ನು ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾಗಿದೆ.
ಎರಡು ವರ್ಷಗಳ ಕಾಲ ಕಾದು, ಕರಿ ಚಿರತೆಯೊಂದರ ಚಿತ್ರವನ್ನು ಸೆರೆ ಹಿಡಿದ ಅನುರಾಗ್ ಗಾವಂಡೆ, ಬಹಳ ಖುಷಿ ಪಟ್ಟಿದ್ದಾರೆ. ಅವರು ಸೆರೆ ಹಿಡಿದ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಲಿಯ ಚಿತ್ರವನ್ನು ಸೆರೆ ಹಿಡಿಯಲು ಕಾಯುತ್ತಿದ್ದ ಗಾವಂಡೆ, ಅನಿರೀಕ್ಷಿತವಾಗಿ ಜಿಂಕೆಯ ಬೇಟೆಯಾಡುತ್ತಾ ಎಂಟ್ರಿ ಕೊಟ್ಟ ಕರಿ ಚಿರತೆಯ ಚಿತ್ರ ಸೆರೆ ಹಿಡಿದಿದ್ದಾರೆ.
https://twitter.com/GautamTrivedi_/status/1311723966164156416?ref_src=twsrc%5Etfw%7Ctwcamp%5Etweetembed%7Ctwterm%5E1311723966164156416%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Frare-black-leopard-spotted-crossing-road-while-hunting-deer-in-maharashtras-tadoba-national-park%2F661290