
ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಈಗಲೂ ಒಳ್ಳೆಯ ಸ್ಥಾನಮಾನಗಳಿಲ್ಲ. ಈಗಲೂ ಅವರನ್ನ ಸಮಾಜ ಬೇರೊಂದು ದೃಷ್ಟಿಯಲ್ಲೇ ನೋಡುತ್ತಿದೆ. ಈ ಮಾತಿಗೆ ಸಾಕ್ಷಿಯೆಂಬಂತೆ ರಣವೀರ್ ಹೀಲ್ಡ್ ಧರಿಸಿದ ಫೋಟೋವನ್ನ ಶೇರ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸಿನಲ್ಲಿ ವ್ಯಂಗ್ಯದ ಸುರಿಮಳೆಯನ್ನೇ ಹರಿಸಿದ್ರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಈ ಫೋಟೋಗಳನ್ನ ಟ್ರೋಲ್ ಮಾಡಲಾಗಿದೆ.
ಟ್ವಿಟರ್ನಲ್ಲಿ ಅರ್ಧ ಫೋಟೊವನ್ನ ಮಾತ್ರ ಶೇರ್ ಮಾಡಿ ಈ ಸೆಲೆಬ್ರಿಟಿ ಯಾರೆಂದು ಊಹಿಸಿ ಎಂದು ಹೇಳಲಾಗಿತ್ತು. ಹೈ ಹೀಲ್ಡ್ನ್ನು ಕಂಡ ಅನೇಕರು ಇದು ಸೋನಾಕ್ಷಿ ಸಿನ್ಹಾ, ಪ್ರಿಯಾಂಕಾ ಚೋಪ್ರಾ, ಶ್ರದ್ಧಾ ಕಪೂರ್ ಎಂದೆಲ್ಲ ಗೆಸ್ ಮಾಡಿದ್ದರು. ಆದರೆ ಇದಾದ ಬಳಿಕ ನೆಟ್ಟಿಗರೊಬ್ಬರು ರಣವೀರ್ರ ಈ ಪೂರ್ತಿ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಬಳಿಕ ಸಖತ್ ಟ್ರೋಲ್ ಆಗಿದೆ.