ಮದುವೆ ಕಾರಣಕ್ಕೆ ಮತಾಂತರವಾಗುವುದನ್ನ ಒಪ್ಪಲು ಸಾಧ್ಯವಿಲ್ಲ ಅಂತಾ ಅಲಹಾಬಾದ್ ಹೈಕೋರ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಲವ್ ಜಿಹಾದ್ ವಿರುದ್ಧ ನಮ್ಮ ಸರ್ಕಾರ ಹೊಸ ಕಾನೂನನ್ನ ಜಾರಿಗೆ ತರಲಿದೆ ಅಂತಾ ಹೇಳಿದ್ದಾರೆ.
ಅಲ್ಲದೇ ಹಿಂದೂ ಹೆಣ್ಣುಮಗಳ ಗೌರವ ಹಾಗೂ ಅಸ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿದ್ರೆ ಅಂತವರ ರಾಮ್ ನಾಮ್ ಸತ್ಯ ಹೈ (ಜೀವನದ ಕೊನೆಯ ಕ್ಷಣ) ಹಾದಿಯನ್ನ ಶುರು ಮಾಡುತ್ತೇವೆ ಅಂತಾ ವಾರ್ನಿಂಗ್ ನೀಡಿದ್ದಾರೆ.
ಅಂತರ್ಜಾತಿ ವಿವಾಹವಾಗಿದ್ದ ದಂಪತಿ ರಕ್ಷಣೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಈ ಮಹತ್ವದ ಆದೇಶ ನೀಡಿದ್ದರು. ಪ್ರಿಯಾನ್ಶಿ ಅಲಿಯಾಸ್ ಸಮ್ರೀನ್ ಮತ್ತಾಕೆಯ ಪತಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಮದುವೆ ಉದ್ದೇಶದಿಂದ ಮತಾಂತರವಾದರೆ ಅದನ್ನ ಮಾನ್ಯ ಮಾಡಲು ಸಾಧ್ಯವಿಲ್ಲ ಅಂತಾ ನ್ಯಾಯಾಲಯ ಹೇಳಿದೆ.