ಹೊಸ ಕೃಷಿ ಕಾನೂನನ್ನ ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಚಕ್ಕಾ ಜಾಮ್ (ರಸ್ತೆ ತಡೆ)ಗೆ ಕರೆ ನೀಡಿವೆ. ಟ್ರ್ಯಾಕ್ಟರ್ ಪರೇಡ್ನಿಂದಾದ ಅಚಾತುರ್ಯಗಳು ಮರುಕಳಿಸದಂತೆ ದೆಹಲಿ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ. ಈ ನಡುವೆ ಉತ್ತರ ಪ್ರದೇಶ ರೈತ ಮುಖಂಡ ರಾಕೇಶ್ ಟಿಕೈತ್ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ.
ರಾಕೇಶ್ ಟಿಕೈತ್ ಈ ವಿಚಾರವಾಗಿ ಮಾತನಾಡಿ, ಶನಿವಾರ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ನಲ್ಲಿ ಚಕ್ಕಾ ಜಮ್ ನಡೆಯೋದಿಲ್ಲ.
ಆದರೆ ರಾಕೇಶ್ ಯಾಕೆ ಈ ನಿರ್ಧಾರವನ್ನ ತೆಗೆದುಕೊಂಡ್ರು ಅನ್ನೋದಕ್ಕೆ ಇಲ್ಲಿಯವರೆಗೆ ಸ್ಪಷ್ಟ ಕಾರಣ ಲಭ್ಯವಾಗಿಲ್ಲ. ಜನವರಿ 26ರಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ಬಳಿಕ ಮತ್ತೊಂದು ಹಿಂಸಾಚಾರ ನಡೆಯಬಹುದು ಎಂಬ ಹಿಂಜರಿಕೆಯಿಂದ ರಾಕೇಶ್ ಟಿಕೈತಿ ಈ ನಿರ್ಧಾರವನ್ನ ಕೈಗೊಂಡಿದ್ದಿರಬಹುದು ಎಂದು ಹೇಳಲಾಗ್ತಿದೆ. ಬಿಜೆಪಿ ಆಡಳಿತವಿರುವ ಎರಡೂ ರಾಜ್ಯಗಳಲ್ಲಿ ಈ ನಿರ್ಧಾರ ಕೈಗೊಂಡಿರೋದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.