alex Certify ರಾಜ್ಯಸಭೆಯ 11 ಸ್ಥಾನಗಳ ಚುನಾವಣೆಗೆ ದಿನಾಂಕ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಸಭೆಯ 11 ಸ್ಥಾನಗಳ ಚುನಾವಣೆಗೆ ದಿನಾಂಕ ಫಿಕ್ಸ್

ರಾಜ್ಯಸಭೆಯಲ್ಲಿ ಸದ್ಯ ಖಾಲಿ ಇರುವ 11 ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿರುವ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಉತ್ತರ ಪ್ರದೇಶದ 10 ಸ್ಥಾನ ಹಾಗೂ ಉತ್ತರಾಖಂಡ್​​ನಲ್ಲಿ ಖಾಲಿ ಇರುವ 1 ಸ್ಥಾನಕ್ಕೆ ನವೆಂಬರ್​ 9ರಂದು ಚುನಾವಣೆ ನಡೆಯಲಿದೆ. ಹಾಗೂ ಮತ ಎಣಿಕೆ ಕಾರ್ಯ ಕೂಡ ಅಂದೇ ನಡೆಯಲಿದೆ.

ರಾಜ್ಯ ಸಭೆಯ ಸದಸ್ಯರಾಗಿರುವ ಕೇಂದ್ರ ಸಚಿವ ಹರ್​ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ನಾಯಕ ರಾಮ್​ ಗೋಪಾಲ್​ ಯಾದವ್​, ಬಿಎಸ್​ಪಿಯ ಬೀರ್​ ಸಿಂಗ್​, ಕಾಂಗ್ರೆಸ್​ನ ರಾಜ್​ ಬಬ್ಬರ್​ ಸೇರಿದಂತೆ ಒಟ್ಟು 11 ಮಂದಿಯ ಅಧಿಕಾರಾವಧಿ ನವೆಂಬರ್​ನಲ್ಲಿ ಅಂತ್ಯಗೊಳ್ಳಲಿದೆ.

ಚುನಾವಣೆ ನಡೆಯಲಿರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಥರ್ಮಲ್​ ಸ್ಕ್ರೀನಿಂಗ್​ ಹಾಗೂ ಮಾಸ್ಕ್​ ಬಳಕೆ ಸೇರಿದಂತೆ ಕರೊನಾ ನಿಯಂತ್ರಣದ ಎಲ್ಲಾ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗುತ್ತೆ ಅಂತಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...