ರಾಜ್ಯಸಭೆಯಲ್ಲಿ ಸದ್ಯ ಖಾಲಿ ಇರುವ 11 ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿರುವ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಉತ್ತರ ಪ್ರದೇಶದ 10 ಸ್ಥಾನ ಹಾಗೂ ಉತ್ತರಾಖಂಡ್ನಲ್ಲಿ ಖಾಲಿ ಇರುವ 1 ಸ್ಥಾನಕ್ಕೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಹಾಗೂ ಮತ ಎಣಿಕೆ ಕಾರ್ಯ ಕೂಡ ಅಂದೇ ನಡೆಯಲಿದೆ.
ರಾಜ್ಯ ಸಭೆಯ ಸದಸ್ಯರಾಗಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್, ಬಿಎಸ್ಪಿಯ ಬೀರ್ ಸಿಂಗ್, ಕಾಂಗ್ರೆಸ್ನ ರಾಜ್ ಬಬ್ಬರ್ ಸೇರಿದಂತೆ ಒಟ್ಟು 11 ಮಂದಿಯ ಅಧಿಕಾರಾವಧಿ ನವೆಂಬರ್ನಲ್ಲಿ ಅಂತ್ಯಗೊಳ್ಳಲಿದೆ.
ಚುನಾವಣೆ ನಡೆಯಲಿರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಥರ್ಮಲ್ ಸ್ಕ್ರೀನಿಂಗ್ ಹಾಗೂ ಮಾಸ್ಕ್ ಬಳಕೆ ಸೇರಿದಂತೆ ಕರೊನಾ ನಿಯಂತ್ರಣದ ಎಲ್ಲಾ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗುತ್ತೆ ಅಂತಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.