alex Certify ಶಸ್ತ್ರ ಪೂಜೆ ನೆರವೇರಿಸಿದ ರಕ್ಷಣಾ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಸ್ತ್ರ ಪೂಜೆ ನೆರವೇರಿಸಿದ ರಕ್ಷಣಾ ಸಚಿವ

ಭಾರತ-ಚೀನಾ ನಡುವಿನ ಉದ್ವಿಗ್ನತೆಯ ನಡುವೆಯೇ ಸಿಕ್ಕಿಂನಲ್ಲಿ ಯೋಧರೊಂದಿಗೆ ದಸರಾ ಪ್ರಯುಕ್ತದ ಆಯುಧ ಪೂಜೆಯ ದಿನವನ್ನು ಕಳೆದಿದ್ದಾರೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್.

ಇದೇ ಸಂದರ್ಭದಲ್ಲಿ ಮಿಲಿಟರಿಯ ಆಯುಧಗಳಿಗೆ ಶಸ್ತ್ರ ಪೂಜೆ ನೆರವೇರಿಸಿದ್ದಾರೆ ಸಿಂಗ್. ಜೊತೆಯಲ್ಲಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾನೆ ಸಹ ಇದ್ದರು.

ನಾಥುಲಾ ಪಾಸ್ ಬಳಿ ಇರುವ ಯೋಧರನ್ನು ಭೇಟಿ ಮಾಡಲಿರುವ ಸಿಂಗ್, ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಚೀನಾ ಆಕ್ರಮಿತ ಟಿಬೆಟ್‌ ಎಲ್ಲೆಯ ಬಳಿ ಭಾರೀ ಸಂಖ್ಯೆಯಲ್ಲಿ ಜಮಾವಣೆಯಾಗಿರುವ ಭಾರತೀಯ ಯೋಧರನ್ನು ನೋಡಲು ಅವರು ಮುಂಚೂಣಿ ಪೋಸ್ಟ್‌ಗಳಿಗೂ ಒಂದು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...