ಭಾರತ-ಚೀನಾ ನಡುವಿನ ಉದ್ವಿಗ್ನತೆಯ ನಡುವೆಯೇ ಸಿಕ್ಕಿಂನಲ್ಲಿ ಯೋಧರೊಂದಿಗೆ ದಸರಾ ಪ್ರಯುಕ್ತದ ಆಯುಧ ಪೂಜೆಯ ದಿನವನ್ನು ಕಳೆದಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್.
ಇದೇ ಸಂದರ್ಭದಲ್ಲಿ ಮಿಲಿಟರಿಯ ಆಯುಧಗಳಿಗೆ ಶಸ್ತ್ರ ಪೂಜೆ ನೆರವೇರಿಸಿದ್ದಾರೆ ಸಿಂಗ್. ಜೊತೆಯಲ್ಲಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾನೆ ಸಹ ಇದ್ದರು.
ನಾಥುಲಾ ಪಾಸ್ ಬಳಿ ಇರುವ ಯೋಧರನ್ನು ಭೇಟಿ ಮಾಡಲಿರುವ ಸಿಂಗ್, ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಚೀನಾ ಆಕ್ರಮಿತ ಟಿಬೆಟ್ ಎಲ್ಲೆಯ ಬಳಿ ಭಾರೀ ಸಂಖ್ಯೆಯಲ್ಲಿ ಜಮಾವಣೆಯಾಗಿರುವ ಭಾರತೀಯ ಯೋಧರನ್ನು ನೋಡಲು ಅವರು ಮುಂಚೂಣಿ ಪೋಸ್ಟ್ಗಳಿಗೂ ಒಂದು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.