alex Certify ಸೂಪರ್ ಸ್ಟಾರ್​ ರಜಿನಿಕಾಂತ್​ ಆರೋಗ್ಯದಲ್ಲಿ ಕೊಂಚ ಚೇತರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಸ್ಟಾರ್​ ರಜಿನಿಕಾಂತ್​ ಆರೋಗ್ಯದಲ್ಲಿ ಕೊಂಚ ಚೇತರಿಕೆ

ಅತಿಯಾದ ರಕ್ತದೊತ್ತಡದಿಂದ ಹೈದರಾಬಾದ್​​ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ರಾಜಕಾರಣಿ ರಜಿನಿಕಾಂತ್​ ಆರೋಗ್ಯದಲ್ಲಿ ಪ್ರಗತಿ ಕಂಡು ಬರುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಆದರೂ ರಜಿನಿಕಾಂತ್​ ರಕ್ತದೊತ್ತಡ ಈಗಲೂ ಕೂಡ ಅಗತ್ಯಕ್ಕಿಂತ ಜಾಸ್ತಿಯೇ ಇದೆ ಎಂದು ಹೇಳಲಾಗಿದೆ.

70 ವರ್ಷದ ಸೂಪರ್​ಸ್ಟಾರ್​ ರಜಿನಿಕಾಂತ್​ ಅನ್ನಾತೆ ಸಿನಿಮಾ ಶೂಟಿಂಗ್​ಗಾಗಿ ಹೈದರಾಬಾದ್​ನಲ್ಲಿ ಬೀಡು ಬಿಟ್ಟಿದ್ದರು. ಆದರೆ ಚಿತ್ರತಂಡ ಕೆಲ ಸದಸ್ಯರಿಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಶೂಟಿಂಗ್​ ರದ್ದುಗೊಳಿಸಲಾಗಿತ್ತು.

ರಜನಿಕಾಂತ್​ ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಹಾಗೂ ಅವರ ವರದಿ ನೆಗೆಟಿವ್​ ಬಂದಿತ್ತು. ಇದಾದ ಬಳಿಕ ರಜಿನಿಕಾಂತ್​​ ರಕ್ತದೊತ್ತಡದಲ್ಲಿ ಗಮನಾರ್ಹ ಏರಿಕೆ ಕಂಡು ಬಂದ ಹಿನ್ನೆಲೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ತಮಿಳುನಾಡು ಸಿಎಂ ಈ. ಪಳನಿಸ್ವಾಮಿ ಇಂದು ರಜಿನಿಕಾಂತ್​ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು ಮಾತ್ರವಲ್ಲದೇ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...