alex Certify ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ಗೆ ಕೊರೊನಾ

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಟ್ವಿಟರ್​ನಲ್ಲಿ ಈ ವಿಚಾರವನ್ನ ಶೇರ್​ ಮಾಡಿರುವ ಗೆಹ್ಲೋಟ್​ ಹೋಮ್​ ಐಸೋಲೇಷನ್​ನಲ್ಲಿ ಇರೋದಾಗಿ ಹೇಳಿದ್ದಾರೆ. ಗೆಹ್ಲೋಟ್​​ ಪತ್ನಿ ಕೊರೊನಾ ಪಾಸಿಟಿವ್​ಗೆ ಒಳಗಾಗುತ್ತಿದ್ದಂತೆಯೇ ಗೆಹ್ಲೋಟ್​​ ಹೋಂ ಐಸೋಲೇಷನ್​ನಲ್ಲಿ ಇದ್ದರು.

ಇಂದು ನನ್ನ ಕೊರೊನಾ ವರದಿಯೂ ಪಾಸಿಟಿವ್​ ಬಂದಿದೆ. ನನಗೆ ಯಾವುದೇ ಲಕ್ಷಣಗಳಿಲ್ಲ ಹಾಗೂ ನಾನು ಆರಾಮಾಗಿ ಇದ್ದೇನೆ. ಕೊರೊನಾ ಮಾರ್ಗಸೂಚಿಯಂತೆಯೇ ಐಸೋಲೇಷನ್​ನಲ್ಲಿದ್ದು ನನ್ನ ಕಾರ್ಯ ಮುಂದುವರಿಸಲಿದ್ದೇನೆ ಎಂದು ಗೆಹ್ಲೋಟ್​ ಹಿಂದಿಯಲ್ಲಿ ಟ್ವೀಟಾಯಿಸಿದ್ದರು.

ಬುಧವಾರ ಗೆಹ್ಲೋಟ್​ ತಮ್ಮ ಪತ್ನಿ ಸುನೀತಾ ಗೆಹ್ಲೋಟ್​ ಸೋಂಕಿಗೆ ಒಳಗಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಕೊರೊನಾ ಮಾರ್ಗಸೂಚಿಯಂತೆ ತಾವು ಐಸೋಲೇಷನ್​ನಲ್ಲಿ ಇರೋದಾಗಿಯೂ ಮಾಹಿತಿ ನೀಡಿದ್ದರು.

ರಾಜಸ್ಥಾನದಲ್ಲಿ ಕೊರೊನಾ ಸೋಂಕಿನ ಸಂಬಂಧ ಆಫ್​ಲೈನ್ ಮೀಟಿಂಗ್​​ಗಳ ಮೂಲಕ ಗೆಹ್ಲೋಟ್​ ಮಾಹಿತಿಯನ್ನ ಪಡೆಯಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...