ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿದೇಶಿ ಪ್ರವಾಸದಲ್ಲಿ ಎಂಜಾಯ್ ಮಾಡ್ತಿದ್ದಾರೆ ಎಂಬ ಬಿಜೆಪಿ ಟೀಕೆ ಸಂಬಂಧ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ. ರಾಹುಲ್ ಗಾಂಧಿ ಅನಾರೋಗ್ಯಕ್ಕೀಡಾದ ಅವರ ಸಂಬಂಧಿ ಹಾಗೂ ಅಜ್ಜಿಯನ್ನ ಭೇಟಿಯಾಗಲು ವಿದೇಶಕ್ಕೆ ತೆರಳಿದ್ದಾರೆಯೇ ಹೊರತು ಪ್ರವಾಸಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಸುರ್ಜೇವಾಲಾ ಹೇಳಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ 136ನೇ ಸಂಸ್ಥಾಪನಾ ದಿನದ ಮುನ್ನಾದಿನ ರಾಹುಲ್ ಗಾಂಧಿ ಇಟಲಿಗೆ ಪ್ರಯಾಣ ಬೆಳೆಸಿದ್ದರು. ರಾಹುಲ್ ಅನುಪಸ್ಥಿತಿಯನ್ನ ಬಿಜೆಪಿಯ ಅನೇಕ ನಾಯಕರು ಪ್ರಶ್ನೆ ಮಾಡಿದ್ದರು.
ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಸುರ್ಜೇವಾಲಾ, ರಾಹುಲ್ ಪ್ರಸ್ತುತ ಪಕ್ಷದ ಮುಖ್ಯಸ್ಥರಲ್ಲ. ಅಲ್ಲದೇ ಅವರು ಪಕ್ಷ ವಹಿಸಿದ ಎಲ್ಲಾ ಕರ್ತವ್ಯಗಳನ್ನ ನಿರ್ವಹಿಸುತ್ತಿದ್ದಾರೆ. ಅನಾರೋಗ್ಯ ಪೀಡಿತ ಸಂಬಂಧಿಯನ್ನ ಭೇಟಿಯಾಗಲು ವಿದೇಶಕ್ಕೆ ತೆರಳಿದವರ ವಿರುದ್ಧವೂ ಬಿಜೆಪಿ ಆಕ್ಷೇಪ ಎತ್ತೋದು ಸರಿಯಲ್ಲ ಎಂದು ಹೇಳಿದ್ದಾರೆ.