alex Certify ಬಜೆಟ್​ ಮಂಡನೆ ವೇಳೆ ನಿದ್ದೆ ಮಾಡಿ ಟ್ರೋಲಿಗರ ಬಾಯಿಗೆ ಆಹಾರವಾದ ರಾಹುಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜೆಟ್​ ಮಂಡನೆ ವೇಳೆ ನಿದ್ದೆ ಮಾಡಿ ಟ್ರೋಲಿಗರ ಬಾಯಿಗೆ ಆಹಾರವಾದ ರಾಹುಲ್​

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2021-22ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ಮಾಡಿದ್ದಾರೆ.

ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಬಜೆಟ್​ ಮಂಡನೆ ಮಾಡಲಿದೆ ಎಂಬ ಚರ್ಚೆ ಕಳೆದ ಕೆಲ ದಿನಗಳಿಂದ ನಡೆಯುತ್ತಲೇ ಇತ್ತು.

ಆದರೆ ಇಂದು ಬಜೆಟ್​ ಮಂಡನೆ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​, ಕೃಷಿ, ಆರೋಗ್ಯ, ಕೊರೊನಾ, ಐಟಿ, ಹೆದ್ದಾರಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ.

ಅನೇಕರು ಇದನ್ನ ಸಂಕಷ್ಟದ ಸಮಯದಲ್ಲೂ ಮಾಡಿದ ಬೆಸ್ಟ್ ಬಜೆಟ್​ ಅಂತಾ ಹೇಳಿದ್ರೆ…. ಇನ್ನೂ ಕೆಲವರು ಸಧ್ಯದಲ್ಲೇ ವಿಧಾನಸಭಾ ಚುನಾವಣೆಗಳನ್ನ ಎದುರಿಸಲಿರುವ ರಾಜ್ಯಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ ಎಂದು ಕುಟುಕಿದ್ದಾರೆ.

ಕೇಂದ್ರ ಬಜೆಟ್: ಯಾವುದು ದುಬಾರಿ….? ಯಾವುದು ಅಗ್ಗ….? ಇಲ್ಲಿದೆ ಸಂಪೂರ್ಣ ಮಾಹಿತಿ

ಆದರೆ ಇವೆಲ್ಲ ವಾದ – ಪ್ರತಿವಾದಗಳ ನಡುವೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ. ನಿರ್ಮಲಾ ಸೀತಾರಾಮನ್​​ ಬಜೆಟ್​ ಮಂಡನೆ ಮಾಡುವ ವೇಳೆ ರಾಹುಲ್​ ಗಾಂಧಿ ನಿದ್ದೆ ಮಾಡ್ತಿರುವ ದೃಶ್ಯವೊಂದು ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...