
ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟೊಂದರ ಮೂಲಕ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಸಂದೇಶ ಸಾರಿದ್ದಾರೆ.
ದೇಶದ ಪ್ರತಿಯೊಬ್ಬ ಜನತೆಗೂ ಈ ಸಂಜೀವಿನಿ ಸಿಗುವಂತಾಗಬೇಕು ಎಂದು ಅವರು ಟ್ವೀಟಾಯಿಸಿದ್ದಾರೆ.
ಅಗತ್ಯತೆ ಹಾಗೂ ಬೇಡಿಕೆಗಾಗಿ ಚರ್ಚೆ ಮಾಡೋದು ಹಾಸ್ಯಾಸ್ಪದ ವಿಚಾರವಾಗಿದೆ ದೇಶದ ಪ್ರತಿಯೊಬ್ಬ ಪ್ರಜೆಯೂ ಸುರಕ್ಷಿತ ಜೀವನವನ್ನ ಹೊಂದುವ ಹಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ “#CovidVaccine” ಎಂಬ ಹ್ಯಾಶ್ಟ್ಯಾಗ್ನ್ನು ಬಳಕೆ ಮಾಡಿದ್ದಾರೆ.
ಲಸಿಕೆ ಬೇಕು ಅಂದವರಿಗೆಲ್ಲಾ ನೀಡಲು ಆಗೋದಿಲ್ಲ. ಯಾರಿಗೆ ಲಸಿಕೆಯ ಅವಶ್ಯಕತೆ ಇದೆಯೋ ಅಂತವರಿಗೆ ಮಾತ್ರ ಡೋಸ್ ನೀಡುತ್ತೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆಯನ್ನ ನೀಡಲಾಗುತ್ತಿದೆ.