ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಸಂಬಂಧ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪಿಐಎಲ್ನ್ನು ಎರಡು ವಾರಗಳ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಫ್ರಾನ್ಸ್ನಿಂದ 36 ಯುದ್ಧ ವಿಮಾನಗಳನ್ನ ಖರೀದಿ ಮಾಡುವ ವೇಳೆ ಭಾರತದ ಮಧ್ಯವರ್ತಿಗೆ ಫ್ರೆಂಚ್ನ ರಫೇಲ್ ತಯಾರಕ ಕಂಪನಿ ಡಸಾಲ್ಟ್ ಏವಿಯೇಷನ್ ಬರೋಬ್ಬರಿ 10 ದಶಲಕ್ಷ ಯುರೋ ಹಣವನ್ನ ಲಂಚದ ರೂಪದಲ್ಲಿ ನೀಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಫ್ರಾನ್ಸ್ ಮಾಧ್ಯಮದಲ್ಲಿ ಈ ವರದಿ ಬಿತ್ತರವಾಗಿತ್ತು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ವಕೀಲ ಮನೋಹರ ಲಾಲ್ ಶರ್ಮಾ ಸುಪ್ರೀಂ ಕೋರ್ಟ್ಗೆ ಹೊಸದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ಅಂದರೆ 2018ರಲ್ಲಿ ಇದೇ ವಿಚಾರವಾಗಿ ಶರ್ಮಾ ಸೇರಿದಂತೆ ಅನೇಕರು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೀಗ ಮತ್ತೆ ಶರ್ಮಾ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ತನಿಖೆಗೆ ಸುಪ್ರೀಂ ಕೋರ್ಟ್ ಮುಹೂರ್ತ ಫಿಕ್ಸ್ ಮಾಡಿದೆ.