alex Certify ರಫೇಲ್​ ಯುದ್ಧ ವಿಮಾನ ಖರೀದಿ ವಿವಾದ: PIL ವಿಚಾರಣೆಗೆ ʼಸುಪ್ರೀಂʼ ನಿಂದ ಮುಹೂರ್ತ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಫೇಲ್​ ಯುದ್ಧ ವಿಮಾನ ಖರೀದಿ ವಿವಾದ: PIL ವಿಚಾರಣೆಗೆ ʼಸುಪ್ರೀಂʼ ನಿಂದ ಮುಹೂರ್ತ ಫಿಕ್ಸ್

ರಫೇಲ್​ ಯುದ್ಧ ವಿಮಾನ ಖರೀದಿ ಹಗರಣದ ಸಂಬಂಧ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಪಿಐಎಲ್​​ನ್ನು ಎರಡು ವಾರಗಳ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್​ ನಿರ್ಧರಿಸಿದೆ.

ಫ್ರಾನ್ಸ್​ನಿಂದ 36 ಯುದ್ಧ ವಿಮಾನಗಳನ್ನ ಖರೀದಿ ಮಾಡುವ ವೇಳೆ ಭಾರತದ ಮಧ್ಯವರ್ತಿಗೆ ಫ್ರೆಂಚ್​ನ ರಫೇಲ್​ ತಯಾರಕ ಕಂಪನಿ ಡಸಾಲ್ಟ್​ ಏವಿಯೇಷನ್​ ಬರೋಬ್ಬರಿ 10 ದಶಲಕ್ಷ ಯುರೋ ಹಣವನ್ನ ಲಂಚದ ರೂಪದಲ್ಲಿ ನೀಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಫ್ರಾನ್ಸ್​ ಮಾಧ್ಯಮದಲ್ಲಿ ಈ ವರದಿ ಬಿತ್ತರವಾಗಿತ್ತು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ವಕೀಲ ಮನೋಹರ ಲಾಲ್​ ಶರ್ಮಾ ಸುಪ್ರೀಂ ಕೋರ್ಟ್​ಗೆ ಹೊಸದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ ಅಂದರೆ 2018ರಲ್ಲಿ ಇದೇ ವಿಚಾರವಾಗಿ ಶರ್ಮಾ ಸೇರಿದಂತೆ ಅನೇಕರು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್​ ವಜಾಗೊಳಿಸಿತ್ತು. ಇದೀಗ ಮತ್ತೆ ಶರ್ಮಾ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ತನಿಖೆಗೆ ಸುಪ್ರೀಂ ಕೋರ್ಟ್ ಮುಹೂರ್ತ ಫಿಕ್ಸ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...