ಮೇಕೆಯೊಂದನ್ನು ನುಂಗಿದ ಬಳಿಕ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವೊಂದನ್ನು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಈ ಘಟನೆಯು ರಾಮ್ಪುರ ಜಿಲ್ಲೆಯ ಸಿಹಾರಿ ಗ್ರಾಮದಲ್ಲಿ ಘಟಿಸಿದೆ.
ದೊಡ್ಡ ಬೇಟೆಯೊಂದನ್ನು ನುಂಗಿದ ಹೆಬ್ಬಾವಿಗೆ ಚಲಿಸಲು ಕಷ್ಟವಾಗಿಬಿಟ್ಟಿತ್ತು. ಇದನ್ನು ಕಂಡು ಗಾಬರಿಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಚಾರ ಮುಟ್ಟಿಸಿದ್ದಾರೆ.
ಹೆಬ್ಬಾವನ್ನು ರಕ್ಷಿಸಿದ ಅರಣ್ಯ ಇಲಾಖೆ, ಅದನ್ನು ಹತ್ತಿರದ ಅರಣ್ಯ ಪ್ರದೇಶವೊಂದಕ್ಕೆ ಬಿಡುಗಡೆ ಮಾಡಿದ್ದಾರೆ.