ಅದೃಷ್ಟ ಒಮ್ಮೆ ಖುಲಾಯಿಸಿತು ಅಂದರೆ ಮುಗೀತು ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಪಂಜಾಬ್ನ ರೇಣು ಚೌಹಾಣ್ ಎಂಬ ಗೃಹಿಣಿ ಬರೋಬ್ಬರಿ 1 ಕೋಟಿ ರೂಪಾಯಿ ಲಾಟರಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೃತ್ಸರದ ನಿವಾಸಿಯಾದ ರೇಣು, 100 ರೂಪಾಯಿಯನ್ನ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದರ ಫಲಿತಾಂಶ ಫೆಬ್ರವರಿ 11ರಂದು ಪ್ರಕಟವಾಗಿದ್ದು ರೇಣು ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನ ಗೆದ್ದಿದ್ದಾರೆ.
ಈ ಹಣವನ್ನ ಪಡೆದುಕೊಳ್ಳಲು ರೇಣು ಲಾಟರಿ ಟಿಕೆಟ್ ಹಾಗೂ ಅಗತ್ಯ ದಾಖಲೆಗಳನ್ನ ರಾಜ್ಯ ಲಾಟರಿ ವಿಭಾಗಕ್ಕೆ ಸಲ್ಲಿಸಿದ್ದಾರೆ.
ಲಾಟರಿ ವಿಜೇತೆ ರೇಣು ಹಣವನ್ನ ಪಡೆದುಕೊಳ್ಳಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅವರ ಖಾತೆಗೆ ಹಣ ಜಮೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರೇಣು ತಮ್ಮ ಅದೃಷ್ಟ ಖುಲಾಯಿಸಿದ ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರೇಣು, ನನ್ನ ಪತಿ ಅಮೃತಸರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಈ ಬಂಪರ್ ಹಣ ನನ್ನ ಕುಟುಂಬಕ್ಕೆ ತುಂಬಾನೇ ಸಹಾಯಕವಾಗಿದೆ ಎಂದು ಹೇಳಿದ್ರು.