alex Certify ಕೋಳಿ ಮೊಟ್ಟೆ ಇಡುತ್ತಿಲ್ಲವೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುಕ್ಕುಟೋದ್ಯಮಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಳಿ ಮೊಟ್ಟೆ ಇಡುತ್ತಿಲ್ಲವೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುಕ್ಕುಟೋದ್ಯಮಿ..!

ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ಗಂಭೀರ ಪ್ರಕರಣದಲ್ಲಿ ಪೊಲೀಸ್​ ಠಾಣೆ ಮೆಟ್ಟಿಲೇರೋದು ಕಾಮನ್​. ಆದರೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಿವಾಸಿಯೊಬ್ಬ ತನ್ನ ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ..!

ಹೌದು..! ಪೊಲೀಸ್​ ಠಾಣೆಗೆ ಭೇಟಿ ನೀಡಿದ ಕುಕ್ಕುಟೋದ್ಯಮಿ ನಿರ್ದಿಷ್ಟ ಕಂಪನಿಯೊಂದರ ಹೆಸರನ್ನ ಪೊಲೀಸರ ಮುಂದೆ ಹೇಳಿ, ಅದೇ ಕಂಪನಿಯ ಫುಡ್​ನ್ನು ತನ್ನ ಕೋಳಿಗಳಿಗೆ ನೀಡಿದ ಬಳಿಕ ಅವು ಮೊಟ್ಟೆ ಇಡೋದನ್ನ ನಿಲ್ಲಿಸಿವೆ ಎಂದು ಆರೋಪಿಸಿದ್ದಾನೆ.

ಈ ಭಾಗದ ಮೂರ್ನಾಲ್ಕು ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಇದಕ್ಕೆ ಸಂಬಂಧಿಸಿ ಪರಿಹಾರವನ್ನ ಪಾವತಿಸಲು ಫುಡ್​ ತಯಾರಕ ಕಂಪನಿ ಒಪ್ಪಿದ ಹಿನ್ನೆಲೆ ಪೊಲೀಸರು ಯಾವುದೇ ದೂರನ್ನ ದಾಖಲಿಸಿಕೊಂಡಿಲ್ಲ.

ದೂರುದಾರ ವ್ಯಕ್ತಿಯು ಕೋಳಿ ಫಾರಂ ಒಂದರ ಮಾಲೀಕರಾಗಿದ್ದಾರೆ. ಆತನ ಪ್ರದೇಶದಲ್ಲಿದ್ದ ನಾಲ್ಕಕ್ಕೂ ಹೆಚ್ಚು ಕೋಳಿ ಸಾಕಾಣಿಕಾ ಕೇಂದ್ರಗಳು ಈ ಸಮಸ್ಯೆಯನ್ನ ಎದುರಿಸಿವೆ. ಇದಾದ ಬಳಿಕ ಅವರು ದೂರು ನೀಡಲು ಆಗಮಿಸಿದ್ದರು ಎಂದು ಲೋನಿ ಕಲ್ಬೋರ್​ ಠಾಣೆ ಹಿರಿಯ ಪೊಲೀಸ್​ ಇನ್​ಸ್ಪೆಕ್ಟರ್​ ರಾಜೇಂದ್ರ ಮೊಕಾಶಿ ಹೇಳಿದ್ರು.

ಅಹಮದ್​ನಗರ ಜಿಲ್ಲೆಯ ಕೋಳಿ ಫುಡ್​ ತಯಾರಕ ಕಂಪನಿಯಿಂದ ಕೋಳಿಗಳಿಗೆ ಆಹಾರ ಖರೀದಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಯಾವುದಾದರೂ ಫುಡ್​ ಕೋಳಿಗಳ ಆರೋಗ್ಯಕ್ಕೆ ಸೂಕ್ತವೆನಿಸದೇ ಹೋದಲ್ಲಿ ಅವುಗಳು ಮೊಟ್ಟೆ ಹಾಕೋದನ್ನ ನಿಲ್ಲಿಸುತ್ತವೆ. ಹೀಗಾಗಿ ಈ ಹಿಂದೆ ಬಳಕೆ ಮಾಡುತ್ತಿದ್ದ ಹಳೆಯ ಫುಡ್​ಗಳನ್ನ ಹಾಕಿದಾಗ ಕೋಳಿಗಳು ಮೊಟ್ಟೆ ಹಾಕಿವೆ ಅನ್ನೋದನ್ನ ಕೋಳಿ ಫಾರಂ ಮಾಲೀಕ ಗಮನಿಸಿದ್ದಾರೆ.

ಇನ್ನು ಈ ವಿಚಾರವನ್ನ ಫುಡ್​ ತಯಾರಕ ಕಂಪನಿಗೆ ತಿಳಿಸುತ್ತಿದ್ದಂತೆಯೇ ಕೋಳಿ ಫುಡ್ ವಾಪಸ್​ ಪಡೆದ ಅವರು ಪರಿಹಾರವನ್ನೂ ನೀಡೋದಾಗಿ ಪೊಲೀಸರ ಮುಂದೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...